Asianet Suvarna News Asianet Suvarna News

ಪದತ್ಯಾಗ ಬೆನ್ನಲ್ಲೇ ಬಿಎಸ್‌ವೈ ಸಂಪುಟದ ಹಿರಿಯ ಸಚಿವರಿಗೆ ನಡುಕ!

Jul 27, 2021, 9:12 AM IST

ಬೆಂಗಳೂರು(ಜು.27): ಬಿ.ಎಸ್‌.ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ಸಚಿವ ಸಂಪುಟವೂ ವಿಸರ್ಜನೆಯಾಗಿರುವುದರಿಂದ ಇದುವರೆಗೆ ಸಚಿವರಾಗಿದ್ದವರಿಗೆ ನಡುಕ ಶುರುವಾಗಿದೆ.

ಎರಡು ಅಥವಾ ಮೂರು ಬಾರಿ ಸಚಿವರಾದವರು ಹಾಗೂ ಹೆಚ್ಚು ವಯಸ್ಸಾಗಿರುವವರನ್ನು ಮುಂದಿನ ಸಂಪುಟ ರಚನೆಯಲ್ಲಿ ಕೈಬಿಟ್ಟು ಯುವಕರಿಗೆ ಆದ್ಯತೆ ನೀಡಬೇಕು ಎಂಬ ಕೂಗು ಪಕ್ಷದಲ್ಲಿ ಕೇಳಿಬರುತ್ತಿದ್ದು, ಇದುವರೆಗೆ ಸಚಿವರಾಗಿದ್ದವರ ಪೈಕಿ ಹಲವರಿಗೆ ಕೊಕ್‌ ನೀಡುವ ಸಾಧ್ಯತೆ ಹೆಚ್ಚಾಗಿದೆ.