8 ಮಂದಿಗಷ್ಟೇ ಒಲಿದಿದ್ದೇಕೆ ಮಂತ್ರಿ ಪಟ್ಟ?: ಸಿದ್ದು- ಡಿಕೆ ಜಂಗೀಕುಸ್ತಿಗೆ ಕಾರಣರಾದ್ರಾ ಜಮೀರ್?

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಜಂಗೀಕುಸ್ತಿಯ ನಂತರ ಎಂಟು ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
 

Share this Video
  • FB
  • Linkdin
  • Whatsapp

ಸಚಿವ ಸಂಪುಟ ಅನ್ನೋದು ದೊಡ್ಡ ಕಗ್ಗಂಟು. ಅದು ಯಾವ್ದೇ ಸರ್ಕಾರ ಇರ್ಲಿ. ಸುಸೂತ್ರವಾಗಿ, ಬಹಳ ಸ್ಮೂತ್ ಆಗಿ ಮಂತ್ರಿ ಮಂಡಲ ರಚನೆಯಾದ ಚರಿತ್ರೆಯೇ ಇಲ್ಲ. ಶಾಸಕರಾಗೋ ಎಲ್ರಿಗೂ ಮಂತ್ರಿಗಳಾಗ್ಬೇಕು. ಅದಕ್ಕಾಗಿ ನಾ ಮುಂದು ತಾ ಮುಂದು ಅಂತ ಲಾಬಿ ಮೇಲೆ ಲಾಬಿ ನಡೆಸೋದು, ಕೊನೆಗೆ ಕೆಲವರು ಗೆಲ್ಲೋದು, ಇನ್ನು ಕೆಲವರು ಸೋಲೋದು ಸಾಮಾನ್ಯ. ಹಾಗೆ ಸಿದ್ದರಾಮಯ್ಯ ಸರ್ಕಾರದಲ್ಲೂ ಮಂತ್ರಿಗಳಾಗಲು ಕಾಂಗ್ರೆಸ್ ಶಾಸಕರ ದೊಡ್ಡ ದಂಡೇ ತಯಾರಿ ನಡೆಸಿತ್ತು. ಕೆಲವರವಂತೂ ದೆಹಲಿಯಲ್ಲೇ ಟೆಂಟ್ ಹಾಕಿ ಹೈಕಮಾಂಡ್ ಮುಂದೆ ಲಾಬಿ ನಡೆಸಿದ್ರು. ಆದ್ರೆ ಕೊನೆಗೆ ಮಂತ್ರಿ ಪಟ್ಟ ದಕ್ಕಿದ್ದು ಎಂಟು ಮಂದಿಗೆ ಮಾತ್ರ. 

ಇದನ್ನೂ ವೀಕ್ಷಿಸಿ: ಕಾಂಗ್ರೆಸ್‌ ಕೊಟ್ಟ 5 ಗ್ಯಾರಂಟಿಗಳು ಈಡೇರುತ್ತಾ ?: ಈ ಬಗ್ಗೆ ಆರ್ಥಿಕ ತಜ್ಞರು ಹೇಳೋದೇನು ?, ಬೇಕಿರುವ ಹಣವೆಷ್ಟು ?

Related Video