Panchang: ಇಂದಿನಿಂದ ಈ ಸಂವತ್ಸರದ ಕಡೆಯ ಪಕ್ಷ ಆರಂಭ; ಈ ಪಕ್ಷದಲ್ಲಿ ಏನು ಮಾಡಬೇಕು?
ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಬುಧವಾರ, ಪ್ರತಿಪತ್ ತಿಥಿ, ಫಾಲ್ಗುಣಿ ನಕ್ಷತ್ರ.
ಈ ದಿನ ಕೃಷ್ಣ ಪಕ್ಷದ ಪ್ರಾರಂಭ. ಈ ಪಕ್ಷ ಮುಗಿಯುತ್ತಿದ್ದಂತೆಯೇ ಹೊಸ ಸಂವತ್ಸರದ ಆರಂಭ. ಈ ದಿನ ಮಾವಿನ ಹೂವನ್ನು ತಿನ್ನಬೇಕು. ಈ ಮಾಸದಲ್ಲಿ ಎಂಥ ಆಹಾರ ತಿನ್ನಬೇಕು, ಹೇಗೆ ಆರೋಗ್ಯ ಕಾಪಾಡಬೇಕು, ಏನೆಲ್ಲ ಮಾಡಬೇಕು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ.