Today Horoscope: ಈ ದಿನ ಸಿಂಹ ರಾಶಿಯವರಿಗೆ ಪ್ರಯಾಣದಲ್ಲಿ ತೊಡಕಿದ್ದು, ದುರ್ಗಾ ಪ್ರಾರ್ಥನೆ ಮಾಡಿ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

Share this Video
  • FB
  • Linkdin
  • Whatsapp

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷ, ಸೋಮವಾರ, ಚತುರ್ದಶಿ ತಿಥಿ, ಪೂರ್ವಾಷಾಢ ನಕ್ಷತ್ರ.

ಈ ದಿನ ಸೋಮವಾರ ಆಗಿರುವುದರಿಂದ ಪರಶಿವನ ಸನ್ನಿಧಿಯಲ್ಲಿ ಭಸ್ಮಾರ್ಚನೆ ಮಾಡಿಸಿ, ಅದನ್ನು ಹಚ್ಚಿಕೊಳ್ಳಿ. ಇದು ನಿಮಗೆ ರಕ್ಷಾಕವಚವಾಗಿ ಇರಲಿದೆ. ಮಕ್ಕಳು ತುಂಬಾ ಅಳುತ್ತಿದ್ದರೇ ಅಥವಾ ಹಠ, ಹೆದರುತ್ತಿದ್ದರೇ ಇದನ್ನು ಹಚ್ಚಿ. ಇನ್ನೂ ಈ ದಿನದ ರಾಶಿ ಭವಿಷ್ಯ ನೋಡುವುದಾದ್ರೆ, ಮೇಷ ರಾಶಿಯವರು ದೇವಾತಕಾರ್ಯಗಳಲ್ಲಿ ಭಾಗಿಯಾಗುತ್ತಾರೆ. ಅಲ್ಲದೇ ಮಾನಸಿಕ ವ್ಯಥೆ ಉಂಟಾಗಲಿದೆ. ಕರ್ಕಟಕ ರಾಶಿಯ ಸ್ತ್ರೀಯರು ಆರೋಗ್ಯದ ಕಡೆ ಗಮನಹರಿಸಿ. ಹಿರಿಯರ ಸಲಹೆ ಪಡೆಯಿರಿ. ಇಂದು ಲಲಿತಾ ಪ್ರಾರ್ಥನೆ ಮಾಡಿ. 

ಇದನ್ನೂ ವೀಕ್ಷಿಸಿ:  ‘ಯಾರು ಕ್ಷಮೆ ಕೇಳಿದ್ದಾರೋ ಗೊತ್ತಿಲ್ಲ, ನಾನಂತೂ ಕ್ಷಮೆ ಕೇಳಿಲ್ಲ’: ಶಾಸಕ ಬಿ.ಆರ್‌. ಪಾಟೀಲ್ ಗರಂ

Related Video