Panchanga: ಈ ದಿನ ಏಕಾದಶಿಯಾಗಿದ್ದು, ವಿಷ್ಣುವಿನ ಆರಾಧನೆ ಮಾಡಿ
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಗುರುವಾರ, ಏಕಾದಶಿ ತಿಥಿ, ಕೃತ್ತಿಕಾ ನಕ್ಷತ್ರ. ಈ ದಿನ ಏಕಾದಶಿಯಾಗಿದ್ದು ಉಪವಾಸ ಮಾಡುವಂತಹ ಕ್ರಮ ಪರಿಪಾಠ ಬೆಳೆದು ಬಂದಿದೆ. ಉಪವಾಸದಿಂದ ಇಂದ್ರಿಯಗಳ ನಿಗ್ರಹವಾಗುತ್ತದೆ. ಇಂದು ವಿಷ್ಣುವನ್ನು ಆರಾಧಿಸಬೇಕು. ಈ ರೀತಿ ಮಾಡುವುದರಿಂದ ಮನಸು ಮತ್ತು ಇಂದ್ರಿಯ ಇವೆರೆಡೂ ಏಕವಾಗಿ ಒಂದು ಕಡೆ ಹರಿವು ಆಗುತ್ತದೆ. ಇದರ ಜೊತೆಗೆ ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ.