Asianet Suvarna News Asianet Suvarna News

Today Horoscope: ಈ ದಿನ ನಾಗ ಚೌತಿ ಇದ್ದು, ಆಚರಣೆ ಮಾಡುವುದು ಹೇಗೆ ಗೊತ್ತಾ ?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ, ಭಾನುವಾರ, ಚತುರ್ಥಿ ತಿಥಿ, ಹಸ್ತ ನಕ್ಷತ್ರ.

ಈ ದಿನ ನಾಗರ ಚೌತಿ ಇದ್ದು, ನಾಳೆ ನಾಗ ಪಂಚಮಿ ಇದೆ. ನಾಗರ ಚೌತಿಯಂದು ಹುತ್ತಕ್ಕೆ ಹೋಗಿ ಹಾಲನ್ನು ಹಾಕಲಾಗುತ್ತದೆ. ಹುತ್ತದ ಮಣ್ಣು ತುಂಬಾ ಶ್ರೇಷ್ಠವಾಗಿದೆ. ಪೂಜೆಗೆ ಎಷ್ಟು ಬೇಕೋ ಅಷ್ಟೇ ಹಾಲನ್ನು ಹಾಕಿ, ಈ ದಿನ ಉಪವಾಸ ಇರಿ. ನಾಗನ ಆರಾಧನೆಯನ್ನು ತುಂಬಾ ಒಳ್ಳೆಯ ಮನಸ್ಸಿನಿಂದ ಮಾಡಿ. ಈ ದಿನ ನಾಗನನ್ನು ಪೂಜಿಸುವ ಉದ್ದೇಶವೆಂದರೇ, ವಿಷ ಜಂತುಗಳಿಂದ ನಮಗೆ ಯಾವುದೇ ತೊಂದರೆ ಬಾರದಿರಲಿ ಎಂಬುದಾಗಿದೆ. 

ಇದನ್ನೂ ವೀಕ್ಷಿಸಿ: Bengaluru Airport: ಏಷ್ಯಾದ ಮೊದಲ ಗಾರ್ಡನ್‌ ಟರ್ಮಿನಲ್‌ನ ವಿಶೇಷತೆ ಬಲ್ಲೀರಾ?

Video Top Stories