Today Horoscope: ಇಂದಿನಿಂದ ಫಾಲ್ಗುಣ ಮಾಸ ಆರಂಭವಾಗಲಿದ್ದು, ಈ ಮಾಸದಲ್ಲಿ ಸೂರ್ಯನ ಪ್ರಾರ್ಥನೆ ಮಾಡಿ
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಸೋಮವಾರ,ಪ್ರತಿಪತ್ ತಿಥಿ, ಉತ್ತರಾಭಾದ್ರ ನಕ್ಷತ್ರ.
ಇಂದಿನಿಂದ ಫಾಲ್ಗುಣ ಮಾಸ ಪ್ರಾರಂಭವಾಗಿದ್ದು, ಸೂರ್ಯನ ಪ್ರಕರ ಕಿರಣಗಳನ್ನು ನಮಗೆ ದಯಪಾಲಿಸುತ್ತದೆ. ಈ ಮಾಸದಲ್ಲಿ ಸೂರ್ಯನ ಪ್ರಾರ್ಥನೆ ಮಾಡಿ. ಜೊತೆಗೆ ಇಂದು ಸೋಮವಾರ ಆಗಿರುವುದರಿಂದ ಈಶ್ವರನ ಪ್ರಾರ್ಥನೆ ಮಾಡಿ. ಮಿಥುನ ರಾಶಿಯವರಿಗೆ ವೃತ್ತಿಯಲ್ಲಿ ಕಿರಿಕಿರಿ. ಮಾನಸಿಕ ಅಸಮಾಧಾನ. ಹಣಕಾಸಿನ ವ್ಯತ್ಯಾಸ. ವಿದ್ಯಾರ್ಥಿಗಳಿಗೆ ಅಸಮಾಧಾನ. ಕೆಲಸದಲ್ಲಿ ತೊಡಕು. ಮಹಾಲಕ್ಷ್ಮೀ ಸನ್ನಿಧಾನಕ್ಕೆ ಪುಷ್ಪ ಸಮರ್ಪಣೆ ಮಾಡಿ.
ಇದನ್ನೂ ವೀಕ್ಷಿಸಿ: ಸುವರ್ಣ ಕನ್ನಡಿಗ 2024: ಹಲವು ಕ್ಷೇತ್ರದಲ್ಲಿ ಸಾಧನೆಗೈದ 22 ಸಾಧಕರಿಗೆ ಪ್ರಶಸ್ತಿ ಪ್ರದಾನ