ಕಂಬಳ ಜಾಕಿ ಶ್ರೀನಿವಾಸ್ ಗೌಡ ಒಲಿಂಪಿಕ್ಸ್‌ಗೆ ..?

ಮಹೀಂದ್ರ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ, ಶ್ರೀನಿವಾಸ್ ಗೌಡ ಕಂಬಳದ ಓಟವನ್ನು ಗಮನಿಸಿ ಈತನಿಗೆ ಸೂಕ್ತ ತರಬೇತಿ ನೀಡಿದರೆ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವುದು ಪಕ್ಕಾ ಎಂದು ಕೀಡಾ ಸಚಿವ ಕಿರಣ್ ರಿಜಿಜು ಉದ್ದೇಶಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಕ್ರೀಡಾ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

Share this Video
  • FB
  • Linkdin
  • Whatsapp

ಮಂಗಳೂರು(ಫೆ.15): ಕಂಬಳ ಜಾಕಿ ಶ್ರೀನಿವಾಸ್ ಗೌಡ ವೇಗದಲ್ಲಿ ಉಸೇನ್ ಬೋಲ್ಟ್ ಅವರನ್ನೇ ಹಿಂದಿಕ್ಕಿದ್ದು, ಸದ್ಯ ದೇಶಾದ್ಯಂತ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ವಿಶ್ವಖ್ಯಾತ ಉಸೇನ್‌ ಬೋಲ್ಟ್‌ಗಿಂತ ಸ್ಪೀಡಾಗಿ ಓಡಿದ ತುಳುನಾಡಿನ ಕಂಬಳವೀರ!

ಶ್ರೀನಿವಾಸ್ ಗೌಡ 142.50 ಮೀಟರ್ ಕಂಬಳದ ಓಟವನ್ನು ಕೇವಲ 13.62 ಸೆಕೆಂಡ್‌ಗಳಲ್ಲಿ ಪೂರೈಸುವ ಮೂಲಕ ಎಲ್ಲರು ಹುಬ್ಬೇರುವಂತೆ ಮಾಡಿದ್ದಾರೆ. ಹೀಗಿರುವಾಗಲೇ ಮಹೀಂದ್ರ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ, ಶ್ರೀನಿವಾಸ್ ಗೌಡ ಕಂಬಳದ ಓಟವನ್ನು ಗಮನಿಸಿ ಈತನಿಗೆ ಸೂಕ್ತ ತರಬೇತಿ ನೀಡಿದರೆ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವುದು ಪಕ್ಕಾ ಎಂದು ಕ್ರೀಡಾ ಸಚಿವ ಕಿರಣ್ ರಿಜಿಜು ಉದ್ದೇಶಿಸಿ ಟ್ವೀಟ್ ಮಾಡಿದ್ದರು. 

ಕಂಬಳವೀರನಿಗೆ ಮೆಚ್ಚುಗೆ ಮಹಾಪೂರ: ಬಾಹುಬಲಿ 2ರಲ್ಲೂ ನಟಿಸಿದ್ದ ಶ್ರೀನಿವಾಸ!

ಇದಕ್ಕೆ ರಿಜಿಜು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಲ್ಲದೇ ಟ್ರ್ಯಾಕ್ ಓಟದಲ್ಲಿ ಶ್ರೀನಿವಾಸ್ ಸಾಮರ್ಥ್ಯ ಸಾಬೀತಾದರೆ ಒಲಿಂಪಿಕ್ಸ್ ಹಾದಿ ಸುಗಮವಾಗಲಿದೆ. ದೇಶದ ಪ್ರತಿಭೆಗಳನ್ನು ವ್ಯರ್ಥವಾಗಲು ಬಿಡುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಈ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ ನೋಡಿ... 
ಫೆಬ್ರವರಿ 15ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Related Video