Asianet Suvarna News Asianet Suvarna News

ಕಂಬಳವೀರನಿಗೆ ಮೆಚ್ಚುಗೆ ಮಹಾಪೂರ: ಬಾಹುಬಲಿ 2ರಲ್ಲೂ ನಟಿಸಿದ್ದ ಶ್ರೀನಿವಾಸ!

ಕಂಬಳ ವೀರನಿಗೆ ಮೆಚ್ಚುಗೆ ಮಹಾಪೂರ| ಜಾಗತಿಕ ಗಮನ ಸೆಳೆದ ಕಂಬಳ ವೀರ| ವರದಿಗೆ ಜಾಗತಿಕ ರೇಟಿಂಗ್‌| ಜಾಲಸುದ್ದಿ ರೇಟಿಂಗ್‌ ನೀಡುವ ‘ಕ್ರೌಡ್‌ ಟ್ಯಾಂಗಲ್‌’ ಡ್ಯಾಶ್‌ಬೋರ್ಡಲ್ಲಿ 8ನೇ ಸ್ಥಾನ

Buffalo jockey who runs faster than Usain Bolt in kambala race Acted in Bahubali 2
Author
Bangalore, First Published Feb 14, 2020, 8:24 AM IST
  • Facebook
  • Twitter
  • Whatsapp

ಉಡುಪಿ[ಫೆ.14]: ಉಸೇನ್‌ ಬೋಲ್ಟ್‌ಗಿಂತಲೂ ವೇಗವಾಗಿ ಓಡಿ ಅಚ್ಚರಿ ಮೂಡಿಸಿರುವ ಮೂಡುಬಿದಿರೆ ಸಮೀಪದ ಮೀಜಾರಿನ ಕಂಬಳ ಓಟಗಾರ ಶ್ರೀನಿವಾಸ ಗೌಡ ದಿನ ಕಳೆದ ಬೆಳಕಾಗುವಷ್ಟರಲ್ಲಿ ಹೀರೋ ಆಗಿದ್ದಾರೆ. ಶ್ರೀನಿವಾಸಗೌಡ ಕುರಿತು ಗುರುವಾರ ‘ಕನ್ನಡಪ್ರಭ’ ಹಾಗೂ ‘ಸುವರ್ಣ ನ್ಯೂಸ್‌’ ವೆಬ್‌ಜಾಲತಾಣದಲ್ಲಿ ಪ್ರಕಟವಾದ ವರದಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.

ಈ ವರದಿಯನ್ನು ಓದಿದ ಅಸಂಖ್ಯಾತ ಮಂದಿ ಮುಂಜಾನೆಯಿಂದಲೇ ದಿನವಿಡೀ ಶ್ರೀನಿವಾಸಗೌಡಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಅವರ ಸಾಧನೆಯ ಬಗ್ಗೆ ವಿಚಾರಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ರಾಷ್ಟ್ರಮಟ್ಟದ ಸುದ್ದಿ ಮಾಧ್ಯಮಗಳೂ ಶ್ರೀನಿವಾಸ ಗೌಡರನ್ನು ಹುಡುಕಿ ಬಂದವು.

ವಿಶ್ವಖ್ಯಾತ ಉಸೇನ್‌ ಬೋಲ್ಟ್‌ಗಿಂತ ಸ್ಪೀಡಾಗಿ ಓಡಿದ ತುಳುನಾಡಿನ ಕಂಬಳವೀರ!

ಜಾಗತಿಕ ರೇಟಿಂಗ್‌ ಮನ್ನಣೆ:

‘ಬೋಲ್ಟ್‌ಗಿಂತ ಸ್ಪೀಡಾಗಿ ಓಡಿದ ಕಂಬಳವೀರ’ ಎಂಬ ಶೀರ್ಷಿಕೆಯಡಿ ‘ಕನ್ನಡಪ್ರಭ’ ಹಾಗೂ ‘ಸುವರ್ಣ ನ್ಯೂಸ್‌’ ವೆಬ್‌ತಾಣದಲ್ಲಿ ಗುರುವಾರ ಸುದ್ದಿ ಪ್ರಕಟಿಸಲಾಗಿತ್ತು. ಫೇಸ್‌ಬುಕ್‌ ಫೇಸ್‌ಬುಕ್‌ ವೇದಿಕೆಯಲ್ಲಿ ಈ ವಿಶೇಷ ವರದಿಯನ್ನು ಸುಮಾರು 3 ಲಕ್ಷ ಮಂದಿ ಜಾಗತಿಕವಾಗಿ ಗಮನಿಸಿದ್ದು, 10 ಸಾವಿರಕ್ಕೂ ಅಧಿಕ ಲೈಕ್‌ಗಳನ್ನು ಗಳಿಸಿದೆ. ಜಾಲತಾಣಗಳನ್ನು ವಿಶ್ವಮಟ್ಟದಲ್ಲಿ ಪರಿಶೀಲಿಸಿ ರೇಟಿಂಗ್‌ ನೀಡುವ ‘ಕ್ರೌಡ್‌ ಟ್ಯಾಂಗಲ್‌’ ಸೋಶಿಯಲ್‌ ಮೀಡಿಯಾ ಡ್ಯಾಶ್‌ಬೋರ್ಡ್‌ನಲ್ಲೂ ಗುರುವಾರ ಸಂಜೆಯ ವೇಳೆಗೆ 8ನೇ ಸ್ಥಾನ ಗಳಿಸಿದೆ.

ಬೋಲ್ಟ್‌ಗಿಂತ ಸ್ಪೀಡ್ ಈ ತುಳುನಾಡ ಕಂಬಳವೀರ: ವೇಗಕ್ಕೆ ಸಾಟಿಯೇ ಇಲ್ಲ!

ಬಾಹುಬಲಿ 2ರಲ್ಲೂ ನಟಿಸಿದ್ದರು!

ಶ್ರೀನಿವಾಸ ಗೌಡ ಅವರು ಎರಡು ವರ್ಷಗಳ ಹಿಂದೆ ಸ್ಟಾರ್‌ ನಿರ್ದೇಶಕ ರಾಜಮೌಳಿ ಅವರ ಸೂಪರ್‌ ಹಿಟ್‌ ಸಿನಿಮಾ ಬಾಹುಬಲಿ 2 ರಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲಿ ಕೋಣಗಳ ಜತೆ ಓಟಗಾರನಾಗಿ ಕಾಣಿಸಿಕೊಂಡು ಅವರು ಗಮನ ಸೆಳೆದಿದ್ದರು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.

Follow Us:
Download App:
  • android
  • ios