ಮುವಾಯ್ ಥಾಯ್​ ಫೈಟ್‌ನಲ್ಲಿ ಅರುಣ್ ಸಾಗರ್ ಪುತ್ರನ ಅಸಾಮಾನ್ಯ ಸಾಧನೆ..! ಥಾಯ್ಲೆಂಡ್‌ನಲ್ಲಿ ಧೂಳೆಬ್ಬಿಸ್ತಿರೋ ಭಾರತದ ಯಂಗ್​ ಫೈಟರ್​

ಥಾಯ್ಲೆಂಡ್‌ನಲ್ಲಿ ಹೆಚ್ಚು ಜನಪ್ರಿಯವಾಗಿರುವ ಮುವಾಯ್ ಥಾಯ್ ಎನ್ನುವ ಸಮಯ ಕಲೆಯಲ್ಲಿ ಅರುಣ್ ಸಾಗರ್ ಪುತ್ರ ಸೂರ್ಯ ಸಾಗರ್ ಅಸಾಧಾರಣ ಸಾಧನೆ ಮಾಡುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ

First Published Jul 30, 2024, 4:25 PM IST | Last Updated Jul 30, 2024, 4:31 PM IST

ಬೆಂಗಳೂರು: ಕನ್ನಡಿಗರಿಗೆ ಅರುಣ್ ಸಾಗರ್ ಅವರ ಪರಿಚಯ ಮಾಡುವ ಅಗತ್ಯವೇ ಇಲ್ಲ. ಯಾಕೆಂದರೆ ನಟ, ಕಲಾ ನಿರ್ದೇಶಕನಾಗಿ ಅರುಣ್ ಸಾಗರ್ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಸಾಧನೆ ಮಾಡಿದ್ದಾರೆ. ಇದೀಗ ಅರುಣ್ ಸಾಗರ್ ಪುತ್ರ ಸೂರ್ಯ ಸಾಗರ್ ಭಾರತದ ಶ್ರೇಷ್ಠ  ಮುವಾಯ್ ಥಾಯ್ ಫೈಟರ್​ ಆಗುವತ್ತ ದಿಟ್ಟ ಹೆಜ್ಜೆ ಹಾಕುತ್ತಿದ್ದಾರೆ.

ಮುವಾಯ್ ಥಾಯ್ ಅಂದ್ರೆ ಮಾರ್ಷಲ್​ ಆರ್ಟ್​ನಂತೆ ಒಂದು ಸಮರಕಲೆ. ಮುವಾಯ್ ಥಾಯ್​ ಫೈಟರ್‌ಗಳ ನಾಡು ಎಂದೇ ಕರೆಸಿಕೊಳ್ಳುವ ಥಾಯ್ಲೆಂಡ್‌ನಲ್ಲಿ ಸೂರ್ಯ ಸಾಗರ್​ ಅಸಾಮಾನ್ಯ ಸಾಧನೆ ಮಾಡಿದ್ದಾರೆ. ಸೂರ್ಯ ಸಾಗರ್ ಅವರ ಸಾಧನೆಯ ಝಲಕ್ ಇಲ್ಲಿದೆ ನೋಡಿ