ಅಮೆರಿಕದಲ್ಲಿ ನಾವಿಕ ಸಮ್ಮೇಳನ, ಸಂಸದ ತೇಜಸ್ವಿ ಸೂರ್ಯ ಭಾಷಣ

ಸಿನ್ಸಿನಾಟಿ [ಆ. 31] ಅಮೆರಿಕದ ಒಹಾಯೋ ರಾಜ್ಯದ ಸಿನ್ಸಿನಾಟಿ ನಗರದಲ್ಲಿ ಕನ್ನಡ ಹಬ್ಬ ಕಳೆಕಟ್ಟಿದೆ. ಅಮೆರಿಕದ ನಾನಾ ಭಾಗಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಸಾಂಸ್ಕೃತಿಕವಾಗಿ ಸಂಘಟಿಸಲು ಅಸ್ತಿತ್ವಕ್ಕೆ ಬಂದ ಸಂಸ್ಥೆ ‘ನಾವಿಕ’ (ನಾವು ವಿಶ್ವ ಕನ್ನಡಿಗರು-ನಾರ್ತ್ ಅಮೇರಿಕಾ ವಿಶ್ವ ಕನ್ನಡ ಆಗರ) ಸಂಸ್ಥೆಯ 5ನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕನ್ನಡತನ ಮನೆಮಾಡಿದೆ. ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಕನ್ನಡದ ಕವಿಗಳ ಇತಿಹಾಸವನ್ನು ಉಲ್ಲೇಖ ಮಾಡುತ್ತ ಕನ್ನಡ ಮತ್ತು ಕನ್ನಡತನದ ವಿವರಣೆ ನೀಡಿದರು. ತಾಯಿ ನಾಡಿಂದ ದೂರವಾಗಿ ಅಮೆರಿದಲ್ಲಿ ನೆಲೆಸಿದ್ದರೂ ಕನ್ನಡತನ ಕಾಪಾಡಿಕೊಂಡು ಬಂದಿದ್ದಕ್ಕೆ ಧನ್ಯವಾದ ಸಲ್ಲಿಸಿದರು. 

Share this Video
  • FB
  • Linkdin
  • Whatsapp

ಇದನ್ನು ಓದಿ: ಅಮೆರಿಕದಲ್ಲಿ ನಾವಿಕ ಕನ್ನಡ ಹಬ್ಬದ ಸಂಭ್ರಮ , ಸಂಗೀತದ ರಸದೌತಣ

Related Video