ಕುಮಾರಧಾರಾ ನದಿಯಲ್ಲಿ ಸಿಕ್ಕ ಮದ್ಯದ ಬಾಟಲಿಗಳೆಷ್ಟು? ಇದು ನಮ್ಮ ಹಣೆಬರಹ!
ನದಿ ಮತ್ತು ನೀರಿನ ಮೂಲಗಳು ಮಾನವನ ದುರಾಸೆಯ ಪ್ರತೀಕವಾಗಿ ಪ್ರತಿದಿನ ಮಾಲಿನ್ಯದ ಪ್ರಮಾಣದಲ್ಲಿ ಏರಿಕೆಯ ಹಾದಿಯಲ್ಲಿಯೇ ಸಾಗುತ್ತಿವೆ. ಕುಕ್ಕೆ ಸುಬ್ರಹ್ಮಣ್ಯದ ಕ್ಷೇತ್ರಕ್ಕೆ ಇನ್ನೊಂದು ಅರ್ಥ ತಂದುಕೊಟ್ಟಿರುವ ಕುಮಾರಧಾರ ನದಿಯೂ ಮಾನವನ ಆಸೆಗೆ ಬಲಿಯಾಗಿ ಮಾಲಿನ್ಯದ ಗೂಡಾಗಿದೆ. ಆದರೆ ಒಂದು ಸಂಘಟನೆ ಸ್ವಯಂ ಆಘಿ ಸ್ವಚ್ಛತಾ ಕಾರ್ಯಕ್ಕೆ ಇಳಿದಿದೆ.

ಕುಮಾರಧಾರಾ ನದಿ ಸ್ವಚ್ಛ ಮಾಡಲು ಇಳಿದ ಯುವ ಬ್ರಿಗೇಡ್ ತಂಡಕ್ಕೆ ಸಿಕ್ಕಿದ್ದು ರಾಶಿ ರಾಶಿ ಕಸದ ಪರ್ವತಗಳೂ. ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ನದಿಗಳಿದ ಸ್ವಯಂ ಸೇವಕರು ಪ್ಲಾಸ್ಟಿಕ್ ಸೇರಿದಂತೆ ಇತರೇ ತ್ಯಾಜ್ಯಗಳನ್ನು ಕಂಡು ದಂಗಾಗಿ ಹೋಗಿದ್ದಾರೆ.
ಕುಮಾರಧಾರಾ ನದಿಯಲ್ಲಿ ಶೇಖರಗೊಂಡಿದ್ದ 20ಕ್ಕೂ ಹೆಚ್ಚು ಟ್ರಾಕ್ಟರ್ ಗಳಷ್ಟು ತ್ಯಾಜ್ಯವನ್ನು ನದಿಯಿಂದ ಹೊರ ತೆಗೆಯಲಾಗಿದೆ. ಸುಮಾರು 10 ಸಾವಿರ ಪ್ಲಾಸ್ಟಿಕ್ ಮತ್ತು ಗಾಜಿನ ಬಾಟಲಿಗಳನ್ನು ನದಿಯಿಂದ ಎತ್ತಲಾಗಿದ್ದು, ಇವುಗಳಲ್ಲಿ 3 ಸಾವಿರಕ್ಕೂ ಹೆಚ್ಚು ಮದ್ಯದ ಬಾಟಲಿಗಳು ಸಿಕ್ಕಿರುವುದು ನಮ್ಮ ಜನ ಎತ್ತ ಸಾಗಿದ್ದಾರೆ ಎಂಬ ಕತೆ ಹೇಳುತ್ತಿದೆ. ಸುಬ್ರಹ್ಮಣ್ಯ ಕ್ಷೇತ್ರ ಪರಿಸರದಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಇದ್ದರೂ ಇಷ್ಟೊಂದು ಬಾಟಲಿ ಎಲ್ಲಿಂದ ಬಂತು ಎಂಬುದಕ್ಕೆ ಉತ್ತರ ನಮಗೆ ಗೊತ್ತಿದೆ.
ಸುಬ್ರಹ್ಮಣ್ಯದಲ್ಲಿ 12 ಕೋಟಿ ವೆಚ್ಚದಲ್ಲಿ ಶುದ್ಧೀಕರಣ ಘಟಕ ತೆರೆದಿದ್ದರೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದೀಗ ಯುವ ಬ್ರಿಗೇಡ್ ಸಂಘಟನೆಯ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಕಳೆದ ಎರಡು ದಿನಗಳಿಂದ ಸ್ವಚ್ಛತಾ ಕಾರ್ಯ ನಡೆಸಿದ್ದು ಯಾತ್ರಿಗಳು ಇವರ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.