ಪತ್ರಿಕಾ ಸ್ವಾತಂತ್ರ್ಯ ದಿನಕ್ಕೂ ಮುನ್ನ ಅರಿವು ವಿಸ್ತರಿಸಿದ ಸಂವಾದ
ವಿಶ್ವ ಪತ್ರಿಕಾ ಸ್ವಾತಂತ್ರ್ಯದ ದಿನಕ್ಕೂ ಮುನ್ನ ನಡೆದ ವೈಶಿಷ್ಟ್ಯಪೂರ್ಣ ಕಾರ್ಯಕ್ರಮವನ್ನು ಪತ್ರಕರ್ತರ ಆದಿಯಾಗಿ ಎಲ್ಲರೂ ಮೆಚ್ಚಿಕೊಂಡರು. ಕನ್ನಡಪ್ರಭ, ಸುವರ್ಣ ನ್ಯೂಸ್, ಕರ್ನಾಟಕ ಪತ್ರಕರ್ತೆಯರ ಸಂಘ, ದಿ ಯುಎಸ್ ಕನ್ಸಲೇಟ್ ಜನರಲ್ ಚೆನ್ನೈ ಸಹಯೋಗದಲ್ಲಿ ‘ಮಾಧ್ಯಮಗಳ ಮೂಲಕ ಸತ್ಯಾನ್ವೇಷಣೆ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಾಗರಿಕನ ಪಾತ್ರ’ ಎಂಬ ವಿಷಯದ ಮೇಲೆ ನಡೆದ ಸಂವಾದ ಪ್ರಸ್ತುತ ಮಾಧ್ಯಮಗಳು ಎದುರಿಸುತ್ತಿರುವ ಸವಾಲುಗಳು ಮತ್ತು ಪರಿಹಾರೋಪಾಯಗಳನ್ನು ಚರ್ಚೆ ಮಾಡಿತು.