
ಡಿಕೆ ಬಿಟ್ಟ ಬಾಣ ಅವರಿಗೇ ತಿರುಗುಬಾಣವಾಯ್ತಾ? ಡಿ.ಕೆ.ಶಿವಕುಮಾರ್ ಕನಸಿನ ಕೂಸಿಗೆ ನೂರೆಂಟು ವಿಘ್ನ
ಕನಸಿನ ಯೋಜನೆಗೆ ನೂರೆಂಟು ವಿಘ್ನಗಳೇಕೆ..? ಹೇಮಾವತಿ ನದಿ ನೀರಿಗಾಗಿ ಧಗಧಗಿಸಿದ್ದೇಕೆ ಕಲ್ಪತರು ನಾಡು..? ಹೋರಾಟದ ಕಿಚ್ಚಿನ ಮಧ್ಯೆ ಮುಂದೇನ್ ಮಾಡ್ತಾರೆ ಡಿಕೆ..? ಇದುವೇ ಇವತ್ತಿನ ಸುವರ್ಣ ಸ್ಪೆಷಲ್ ಜಲಾಯುಧ..ಬಂಡೆ ಬಡಬಾಗ್ನಿ
ಚಕ್ರವ್ಯೂಹದಲ್ಲಿ ಸಿಲುಕಿಕೊಂಡ್ರಾ ಡಿ.ಕೆ.ಶಿವಕುಮಾರ್..? ಕನಕವೀರನ ಸುತ್ತ ಎದ್ದು ನಿಂತಿದೆ ಜಲಾಗ್ನಿಯ ದಿಗ್ಬಂಧನ..! ನೀರಿನಿಂದಲೇ ಬೆಂಕಿಯ ಬಡಬಾಗ್ನಿ ಎದ್ದಿದೆ.. ಆಕ್ರೋಶದ ಜ್ವಾಲೆ ಹೊತ್ತಿಯುರಿದಿದೆ. ತಮ್ಮ ಬತ್ತಳಿಕೆಯಲ್ಲಿದ್ದ ಜಲಾಯುಧವನ್ನ ಝಳಪಿಸಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಅದುವೇ ತಿರುಗುಬಾಣವಾಯ್ತಾ..? ಕನಸಿನ ಯೋಜನೆಗೆ ನೂರೆಂಟು ವಿಘ್ನಗಳೇಕೆ..? ಹೇಮಾವತಿ ನದಿ ನೀರಿಗಾಗಿ ಧಗಧಗಿಸಿದ್ದೇಕೆ ಕಲ್ಪತರು ನಾಡು..? ಹೋರಾಟದ ಕಿಚ್ಚಿನ ಮಧ್ಯೆ ಮುಂದೇನ್ ಮಾಡ್ತಾರೆ ಡಿಕೆ..? ಇದುವೇ ಇವತ್ತಿನ ಸುವರ್ಣ ಸ್ಪೆಷಲ್ ಜಲಾಯುಧ..ಬಂಡೆ ಬಡಬಾಗ್ನಿ
ಹೇಮಾವತಿ ಹಣಾಹಣಿಯ ಹಿಂದೆಯೇ ಡಿಕೆ ಎದುರು ಮತ್ತೊಂದು ಸವಾಲಿದೆ. ಅದು ಕೂಡ ಜಲಸಮರವೇ ಆದ್ರೂ ಅಖಾಡ ಬೇರೆ. ಹಾಗಿದ್ರೆ ಎಲ್ಲಿ ನಡೆಯುತ್ತಿದೆ ಆ ಜಲಸಂಘರ್ಷ..? ಆ ಸಂಘರ್ಷಕ್ಕೆ ಕಾರಣ ಏನು. ಜ್ವಾಲಾಮುಖಿಯಂತೆ ಕುದ್ದಿದ್ದ ಹೇಮಾವತಿ ಲಿಂಕ್ ಕೆನಾಲ್ ಯೋಜನೆ ವಿರುದ್ಧದ ಹೋರಾಟ ಶನಿವಾರ ಸ್ಫೋಟಸಿದೆ. ಇದು ತುಮಕೂರಿನ ಕಥೆ. ಅತ್ತ ಮತ್ತೊಂದು ಜಿಲ್ಲೆಯಲ್ಲಿಯೂ ಬೂದಿ ಮುಚ್ಚಿದ ಕೆಂಡದಂತಿದೆ ಜಲಸಮರದ ಸ್ಥಿತಿ. ಅಲ್ಲಿಯೂ ಕಿಚ್ಚು ಹತ್ತಿಕೊಳ್ಳುವ ಆತಂಕ, ಅನುಮಾನ ಇದ್ದೇ ಇದೆ.
ಹಿಡಕಲ್ ಯೋಜನೆ ಬೂದಿ ಮುಚ್ಚಿದ ಕೆಂಡದಂತಿದ್ರೆ, ಹೇಮಾವತಿ ಲಿಂಕ್ ಕೆನಾಲ್ ಯೋಜನೆ ವಿರೋಧಿಸಿ ತುಮಕೂರು ಧಗಧಗಿಸಿ ಉರಿದಿತ್ತು. ಪ್ರತಿಭಟನೆ ನಿಂತರೂ, ಕಾಮಗಾರಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದ್ರೂ ಜಟಾಪಟಿ ಮತ್ತೆ ಮುಂದುವರೆದಿದೆ.
ಪ್ರತಿಭಟನೆ ನಿಂತಿದೆ. ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಕಾಮಗಾರಿಗೆ ತಾತ್ಕಾಲಿಕ ಬ್ರೇಕ್ ಕೂಡ ಬಿದ್ದಿದೆ. ಆದ್ರೆ ಇಷ್ಟಕ್ಕೆ ಎಲ್ಲವೂ ಮುಗಿದಿಲ್ಲ. ಮತ್ತೊಂದು ಸುತ್ತಿನ ಜಟಾಪಟಿ ಅಲ್ಲಿ ಶುರುವಾಗಿದೆ.
ಇದಾಗಿತ್ತು ಇವತ್ತಿನ ಸುವರ್ಣ ಸ್ಪೆಷಲ್, ನಮಸ್ಕಾರ