ಇನ್ಸ್ಟಾಗ್ರಾಂ ಮೇಲೆ ಖಾಕಿ ಕಣ್ಣು: ಟಿಕ್​ಟಾಕ್​​ ಸ್ಟಾರ್‌​ಗೆ ಬಿತ್ತು 17 ಸಾವಿರ ರೂ. ದಂಡ!

ರೀಲ್ಸ್‌ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡುವವರ ಮೇಲೆ ಪೊಲೀಸರು ಕಣ್ಣಿಟ್ಟಿದ್ದು, ಓರ್ವ ಟಿಕ್‌ ಟಾಕ್ ಸ್ಟಾರ್‌ಗೆ ದಂಡ ವಿಧಿಸಿದ್ದಾರೆ.

First Published Jun 30, 2022, 5:28 PM IST | Last Updated Jun 30, 2022, 5:28 PM IST

ರೀಲ್ಸ್‌ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡುವವರ ಮೇಲೆ ಪೊಲೀಸರು ಕಣ್ಣಿಟ್ಟಿದ್ದು, ಓರ್ವ ಟಿಕ್‌ ಟಾಕ್ ಸ್ಟಾರ್‌ಗೆ ದಂಡ ವಿಧಿಸಿದ್ದಾರೆ. ಬೆಂಗಳೂರಿನ ಖ್ಯಾತ ಟಿಕ್‌ಟಾಕ್‌ ಸ್ಟಾರ್ ಧನವೀರ್ ಎಂಬಾತನಿಗೆ ಪೊಲೀಸರು ಬರೋಬರಿ 17 ಸಾವಿರ ದಂಡ ವಿಧಿಸಿದ್ದು, ಇದು ರೀಲ್ಸ್ ಮಾಡುವವರನ್ನು ಬೆಚ್ಚಿ ಬೀಳಿಸಿದೆ. ಹೆಲ್ಮೆಟ್ ಇಲ್ಲದೇ ಗಾಡಿಯಲ್ಲಿ ಸ್ಟಂಟ್ ಮಾಡಿರುವುದೇ ಇಷ್ಟು ಬರೋಬರಿ ಮೊತ್ತದ ದಂಡ ವಿಧಿಸಲು ಕಾರಣವಾಗಿದೆ.
ಇದಾದ ಬಳಿಕ ಅವರು ವಿಡಿಯೋದಲ್ಲಿ ಗಾಡಿಗಳನ್ನು ತೋರಿಸಬೇಡಿ ಸ್ಟಂಟ್ ಮಾಡಿದರೆ ದಂಡ ಕಟ್ಬೇಕಾಗುತ್ತೆ ಎಂದು ಮತ್ತೊಂದು ವಿಡಿಯೋ ಮಾಡಿ ಎಲ್ಲರಿಗೂ ಮನವಿ ಮಾಡಿದ್ದಾರೆ.