ಕೇಂದ್ರ ಬಜೆಟ್‌ನಿಂದ ಯಾವುದೇ ಲಾಭ ಇಲ್ಲ, ಸಾಲಗಾರರನ್ನಾಗಿ ಮಾಡಿದೆ: ರಾಮಲಿಂಗ ರೆಡ್ಡಿ
ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 8ನೇ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಈ ಕುರಿತಂತೆ ಕಾಂಗ್ರೆಸ್ ಹಿರಿಯ ಸಚಿವ ರಾಮಲಿಂಗಾ ರೆಡ್ಡಿ ವ್ಯಂಗ್ಯವಾಡಿದ್ದಾರೆ.
ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಮ್ಮ 8ನೇ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಹಿರಿಯ ಸಚಿವ ರಾಮಲಿಂಗಾ ರೆಡ್ಡಿ, ಇದರಿಂದ ಯಾರಿಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
1947ರಿಂದ 2014 ವರೆಗೆ ದೇಶದ ಸಾಲ 53 ಲಕ್ಷ ಕೋಟಿ ಇತ್ತು, ಕಳೆದ 11 ವರ್ಷದಲ್ಲಿ ಹೊಸ 150 ಲಕ್ಷ ಕೋಟಿ ಸಾಲ ಮಾಡಿ 200 ಲಕ್ಷ ಕೋಟಿ ಮಾಡಿದ್ದಾರೆ. ಬಿಜೆಪಿ ಬಜೆಟ್‌ನಿಂದ ಏನನ್ನೂ ನಿರೀಕ್ಷಿಸುವಂತಿಲ್ಲ, ದೇಶವನ್ನು ಸಾಲಗಾರನಾಗಿ ಮಾಡಿದೆ. ಜನರ ಆದಾಯ ಹೆಚ್ಚಾಗಿದೆಯಾ? ಬಡತನ ಜಾಸ್ತಿಯಾಗಿದೆ, ಬೆಲೆಗಳು ಜಾಸ್ತಿಯಾಗಿವೆ ಅಷ್ಟೇ ಎಂದು ಸಚಿವ ರಾಮಲಿಂಗಾ ರೆಡ್ಡಿ ಕಿಡಿಕಾರಿದ್ದಾರೆ