ದಸರಾಗೆ ರೆಡಿ ಅರ್ಜುನ & ಟೀಂ; ಗಜಪಡೆ ನಡೆಸಿತು ಭರ್ಜರಿ ತಾಲೀಮ್

ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಆ ಹಿನ್ನೆಲೆಯಲ್ಲಿ ಗಜ ಪಡೆ ಅಂತಿಮ ಹಂತದ ತಾಲೀಮು ನಡೆಸುತ್ತಿದೆ. ಅರಮನೆ ಆವರಣದಿಂದ ಹೊರಟ ಕ್ಯಾಪ್ಟನ್ ಅರ್ಜುನ ಬನ್ನಿ ಮಂಟಪದವರಗೆ ಗಜ ಗಾಂಭೀರ್ಯದ ಹೆಜ್ಜೆ ಹಾಕಿದ್ದಾನೆ. 

Share this Video
  • FB
  • Linkdin
  • Whatsapp

ಮೈಸೂರು (ಸೆ.19): ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಆ ಹಿನ್ನೆಲೆಯಲ್ಲಿ ಗಜ ಪಡೆ ಅಂತಿಮ ಹಂತದ ತಾಲೀಮು ನಡೆಸುತ್ತಿದೆ. ಡಿಸಿಎಫ್ ಅಲೆಕ್ಸಾಂಡರ್, ಪಶು ವೈದ್ಯ ಡಾ. ನಾಗರಾಜ್ ಮಾರ್ಗದರ್ಶನದಲ್ಲಿ ಅರಣ್ಯಾಧಿಕಾರಿಗಳು ದಸರಾ ಗಜಪಡೆಗೆ ಕೊನೆಯ ಹಂತದ ತಾಲೀಮು ನೀಡುತ್ತಿದ್ದಾರೆ.

ಅರಮನೆ ಆವರಣದಲ್ಲಿರುವ ಕ್ರೇನ್ ಮೂಲಕ ಮಾವುತರು ಮತ್ತು ಕಾವಾಡಿಗಳು ಮರದ ಅಂಬಾರಿಯನ್ನು ಕ್ಯಾಪ್ಟನ್ ಅರ್ಜುನನ ಬೆನ್ನಿಗೆ ಕಟ್ಟಿದರು. ಸುಮಾರು 35O ಕೆ.ಜಿ. ತೂಕದ ಮರದ ಅಂಬಾರಿ, 3OO ಕೆ.ಜಿ. ತೂಕದಷ್ಟು ಮರಳು ಮೂಟೆ ಸೇರಿದಂತೆ ಒಟ್ಟು 65O ಕೆಜಿ ತೂಕ ಹೊತ್ತು ಅರ್ಜುನ ಸಾಗಿದ್ದಾನೆ. 

ಅರಮನೆ ಆವರಣದಿಂದ ಹೊರಟ ಕ್ಯಾಪ್ಟನ್ ಅರ್ಜುನ ಬನ್ನಿ ಮಂಟಪದವರಗೆ ಗಜ ಗಾಂಭೀರ್ಯದ ಹೆಜ್ಜೆ ಹಾಕಿದ್ದಾನೆ. 

Related Video