ಬೆಂಗಳೂರು ಗಲಭೆಗೆ 15 'ಬೆಂಕಿ' ಸಾಕ್ಷಿಗಳು..!

ಅಖಂಡ ಶ್ರೀನಿವಾಸ್‌ ಮೂರ್ತಿ ಮನೆ ಮೇಲೆ ನಡೆದ ದಾಳಿ ತಕ್ಷಣಕ್ಕೆ ಆಗಿದ್ದಲ್ಲ. ಎಲ್ಲವೂ ಸ್ಕೆಚ್ ಹಾಕಿಯೇ ಮಾಡಿದ್ದಾಗಿದೆ. ಇದನ್ನೆಲ್ಲಾ ನಾವು ಸುಖಾಸುಮ್ಮನೆ ಹೇಳುತ್ತಿಲ್ಲ. ಒಂದಲ್ಲ ಎರಡಲ್ಲ ಬರೋಬ್ಬರಿ 15 ಸಾಕ್ಷಿಗಳನ್ನು ಇಟ್ಟುಕೊಂಡೇ ಈ ಮಾತನ್ನು ಹೇಳುತ್ತಿದ್ದೇವೆ.

Share this Video
  • FB
  • Linkdin
  • Whatsapp

ಬೆಂಗಳೂರು(ಆ.13): ಒಂದು ವಿವಾದಾತ್ಮಕ ಫೇಸ್‌ಬುಕ್ ಪೋಸ್ಟ್ ಇಡೀ ಬೆಂಗಳೂರನ್ನೇ ಹೊತ್ತಿ ಉರಿಯುವಂತೆ ಮಾಡಿದೆ. ಆದರೆ ಬೆಂಗಳೂರಿನಲ್ಲಿ ನಡೆದ ಈ ಭಯಾನಕ ಘಟನೆ ಆಕಸ್ಮಿಕವಾಗಿ ನಡೆದ ಘಟನೆಯಂತೂ ಅಲ್ಲ. ಇದೊಂದು ಪಕ್ಕಾ ಪೂರ್ವ ನಿಯೋಜಿತ ಕೃತ್ಯ.

ಅಖಂಡ ಶ್ರೀನಿವಾಸ್‌ ಮೂರ್ತಿ ಮನೆ ಮೇಲೆ ನಡೆದ ದಾಳಿ ತಕ್ಷಣಕ್ಕೆ ಆಗಿದ್ದಲ್ಲ. ಎಲ್ಲವೂ ಸ್ಕೆಚ್ ಹಾಕಿಯೇ ಮಾಡಿದ್ದಾಗಿದೆ. ಇದನ್ನೆಲ್ಲಾ ನಾವು ಸುಖಾಸುಮ್ಮನೆ ಹೇಳುತ್ತಿಲ್ಲ. ಒಂದಲ್ಲ ಎರಡಲ್ಲ ಬರೋಬ್ಬರಿ 15 ಸಾಕ್ಷಿಗಳನ್ನು ಇಟ್ಟುಕೊಂಡೇ ಈ ಮಾತನ್ನು ಹೇಳುತ್ತಿದ್ದೇವೆ.

ಬೆಂಗಳೂರು ಬೆಂಕಿಯ ಹಿಂದೆ ನಿಗೂಢ ಪೊಲಿಟಿಕಲ್ ಗೇಮ್..!

ಶಾಸಕರ ಮನೆಗೆ ನುಗ್ಗಿದವರು ದರೋಡೆಕೋರರೇನಲ್ಲ. ಆ ರಣಹೇಡಿಗಳು ಯಾವುದೋ ಉನ್ಮಾದದಲ್ಲಿ ಅಟ್ಯಾಕ್ ಮಾಡಿದವರಂತೂ ಅಲ್ಲ. ಒಂದು ಕೈಯಲ್ಲಿ ದುಡ್ಡು, ಮತ್ತೊಂದು ಕೈಯಲ್ಲಿ ತಲ್ವಾರ್, ಪೆಟ್ರೋಲ್ ಇರುವುದನ್ನೆಲ್ಲ ಗಮನಿಸಿದ್ರೆ ಎಂತವರಿಗೂ ಇದು ತಕ್ಷಣದಲ್ಲಿ ಆಗಿದ್ದಲ್ಲ ಎಂದು ಅರ್ಥವಾಗಿ ಬಿಡುತ್ತೆ. ಬೆಂಗಳೂರು ಗಲಭೆಯ 15 ಸಾಕ್ಷಿಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ.

Related Video