Asianet Suvarna News

ಸಿದ್ದರಾಮಯ್ಯ ಪರ ಹೆಚ್ಚಿದ ಕೂಗು; ಈಗ ಡಿಕೆಶಿ ಸರದಿ!

May 7, 2019, 6:56 PM IST

ಮೈತ್ರಿಕೂಟದ ಶಾಸಕರಿಂದ ಮಾಜಿ ಸಿಎಂ ಸಿದ್ದರಾಮಯ್ಯ ಪರ ಕೂಗು ಕೇಳಲಾರಂಭಿಸಿದೆ. ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ‘ಸಿದ್ದರಾಮಯ್ಯ ಸಿಎಂ ಆದ್ರೆ ಒಳ್ಳೆಯದು’ ಎಂದು ಹೇಳಿದ ಬೆನ್ನಲ್ಲೇ ಅವರ ಮಾತಿಗೆ ಇತರ ನಾಯಕರೂ ಧ್ವನಿಗೂಡಿಸಿದ್ದಾರೆ. ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ  ಆಯ್ತು ಈಗ ಕಾಂಗ್ರೆಸ್‌ನ ಪ್ರಭಾವಿ ನಾಯಕರೂ, ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್ ಕೂಡಾ ಸಿದ್ದರಾಮಯ್ಯರೇ ನಮ್ಮ ನಾಯಕ ಎಂದು ಹೇಳಿದ್ದಾರೆ.