Asianet Suvarna News Asianet Suvarna News

‘ಅಪ್ಪ-ಮಕ್ಕಳ ಆಟ ನೋಡಿದ್ದೇವೆ; ಸತ್ತರೂ ಜೆಡಿಎಸ್ ಜೊತೆ ಹೋಗಲ್ಲ’

Jul 12, 2019, 1:11 PM IST

ಬೆಂಗಳೂರು (ಜು.12): ಬಂಡಾಯ ಶಾಸಕರ ಸಾಮೂಹಿಕ ರಾಜೀನಾಮೆ ನಡುವೆ  ಬಿಜೆಪಿ-ಜೆಡಿಎಸ್ ನಾಯಕರ ಭೇಟಿ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಬಿಜೆಪಿ ನಾಯಕರ ವಿರುದ್ಧ ಅಮಿತ್ ಶಾ ಸಿಟ್ಟಾಗಿದ್ದು, ಇತ್ತ ರಾಜ್ಯ ಬಿಜೆಪಿ ನಾಯಕರು ತೇಪೆ ಹಚ್ಚುವ ಕೆಲಸ ಮುಂದುವರಿಸಿದ್ದಾರೆ. ಅಪ್ಪ ಮಕ್ಕಳು ಇಬ್ಬರು ದೊಡ್ಡ ಕಲಾವಿದರು, ಅವರ ಆಟ ನೋಡಿದ್ದೇವೆ, ಸತ್ತರೂ ಅವರ ಜೊತೆ ಹೋಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.