
ಬಂಗಾರಿ, ನನ್ನ ಫ್ಲವರ್ ಅಂದವನೇ ಇದೇನ್ಮಾಡ್ಬಿಟ್ಟ!ಬಾಯ್‌ಫ್ರೆಂಡ್ ಜೊತೆ ಹೋದ 3 ಮಕ್ಕಳ ತಾಯಿ
ಸೋಶಿಯಲ್ ಮೀಡಿಯಾದಲ್ಲಿ 'ಬಂಗಾರಿ' ಎಂದು ವೈರಲ್ ಆಗಿದ್ದ ಮಂಜು, ಇದೀಗ ತನ್ನ ಪತ್ನಿ ಲೀಲಾಳನ್ನೇ ಕೊಲೆ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಅಡ್ಡಬಂದ ಲೀಲಾಳ ಗೆಳೆಯ ಸಂತು ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ್ದು, ಆತನ ಸ್ಥಿತಿ ಗಂಭೀರವಾಗಿದೆ.
ಅದು ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿರುವ ಕುಟುಂಬ.. ಮೂರು ಮಕ್ಕಳ ತಾಯಿ ಬಾಯ್‌ಫ್ರೆಂಡ್ ಜೊತೆ ಹೋದ್ರೆ ಗಂಡ ಅವಳ ಫೋಟೋ ಹಿಡಿದು ಬಂಗಾರಿ ಚಿನ್ನು ಅಂತ ಅಳುತ್ತಿದ್ದ.. ಯಸ್.. ನಾವು ಮಾತನ್ನಾಡುತ್ತಿರೋದು ಅದೇ ಮಂಜು ಮತ್ತು ಲೀಲಾ ಕುಟುಂಬದ ಬಗ್ಗೆ.. ಆವತ್ತು ನನಗೆ ನನ್ನ ಹೆಂಡತಿ ಬೇಕು ಅಂತ ಬೀದಿ ರಂಪಾಟ ಮಾಡಿದ್ದ ಮಂಜು ಟ್ರೋಲ್ ಪೇಜ್ಗಳಿಗೂ ತುತ್ತಾಗಿದ್ದ. ಆವತ್ತು ಲೀಲಾ ತನ್ನ ಮಗಳನ್ನ ಕರೆದುಕೊಂಡು ಗೆಳೆಯ ಸಂತು ಜೊತೆ ಜೀವನ ಕಳೆಯಲು ಹೊರಟು ಹೋಗಿದ್ಲು..