ಎದೆ ಝಲ್ಲೆನಿಸುತ್ತೆ ಈ ವಿಡಿಯೋ: ಜಲಪಾತದ ಬಳಿ ಹೆಚ್ಚು ಎಚ್ಚರವಿರಲಿ
ಇಲ್ಲೊಂದು ಕಡೆ ತಾಯಿ ಮಗು ಜಲಪಾತದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ತಾಯಿ ಮಗುವನ್ನು ರಕ್ಷಿಸಿ ವ್ಯಕ್ತಿ ನೀರಲ್ಲಿ ಕೊಚ್ಚಿ ಹೋಗಿದ್ದ. ನೀರು ರಭಸವಾಗಿ ಹರಿಯುತ್ತಿತ್ತು. ಬಂಡೆಗಳ ಮಧ್ಯೆ ಭೋರ್ಗರೆಯುತ್ತಿದ್ದ ನೀರಿನ ಸದ್ದೇ ಭಯಂಕರವಾಗಿತ್ತು. ತಾಯಿ ಮಗು ಜಲಪಾತದ ಅಂಚಿನಲ್ಲಿ ಸಾವು ಬದುಕಿನ ನಡುವೆ ಸಿಲುಕಿದ್ದರು. ರಕ್ಷಿಸೋಕೆ ಹೋದ ಯುವಕರಿಗೇನಾಯ್ತು ನೋಡಿ
ತಮಿಳುನಾಡು(ಅ.28): ಇಲ್ಲೊಂದು ಕಡೆ ತಾಯಿ ಮಗು ಜಲಪಾತದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ತಾಯಿ ಮಗುವನ್ನು ರಕ್ಷಿಸಿ ವ್ಯಕ್ತಿ ನೀರಲ್ಲಿ ಕೊಚ್ಚಿ ಹೋಗಿದ್ದ. ನೀರು ರಭಸವಾಗಿ ಹರಿಯುತ್ತಿತ್ತು. ಬಂಡೆಗಳ ಮಧ್ಯೆ ಭೋರ್ಗರೆಯುತ್ತಿದ್ದ ನೀರಿನ ಸದ್ದೇ ಭಯಂಕರವಾಗಿತ್ತು. ತಾಯಿ ಮಗು ಜಲಪಾತದ ಅಂಚಿನಲ್ಲಿ ಸಾವು ಬದುಕಿನ ನಡುವೆ ಸಿಲುಕಿದ್ದರು.
ಮನಿಕೆ ಮಗೆ ಹಿತೆ ಹಾಡಿಗೆ ಬೆಲ್ಲಿ ಕುಣಿಸಿ, ಶಹಭ್ಭಾಸ್ ಎನಿಸಿಕೊಂಡ ವೈಯ್ಯಾರಿ..!
ನಿಜಕ್ಕೂ ಇದು ಎದೆ ನಡುಗಿಸುವ ದೃಶ್ಯ. ತಾಯಿ ಮಗುವನ್ನು ಕಾಪಾಡಲು ಹೋಗಿ ಯುವಕನೇ ನೀರಲ್ಲಿ ಕೊಚ್ಚಿ ಹೋಗಿದ್ದ. ಇನ್ನೊಂದು ಬದಿಗಿದ್ದ ಜನರು ಅವರನ್ನು ಹೋಗದಂತೆ ಹೇಳು, ಬಿದ್ದರೆ ಅಷ್ಟೇ ಮತ್ತೆ ಎಂದು ಜನರು ಕೂಗಿ ಕರೆಯುವುದು ವಿಡಿಯೋದಲ್ಲಿ ಕೇಳಬಹುದು. ಮಹಿಳೆಯನ್ನು ಸುರಕ್ಷಿತವಾಗಿ ಮೇಲೆ ಹತ್ತಿಸಿದರೂ ಇಬ್ಬರೂ ಯುವಕರು ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ಸ್ವಲ್ಪ ದೂರ ಕೊಚ್ಚಿಕೊಂಡು ಹೋದ ನಂತರ ಇಬ್ಬರೂ ಪವಾಡ ರೀತಿಯಲ್ಲಿ ಈಜಿ ಪಾರಾಗಿದ್ದಾರೆ.