
ಕೋಟೆಕಾರ್ ಬ್ಯಾಂಕ್ ರಾಬರಿ: 5 ದಿನದೊಳಗೆ ಖದೀಮರು ಪೊಲೀಸರಿಗೆ ಸಿಕ್ಕಿಬಿದ್ದಿದ್ದೇ ರೋಚಕ ಸ್ಟೋರಿ!
ಕೋಟಿ ಕೋಟಿ ಲೂಟಿ ಹೊಡೀತ್ತಾರೆ ಅಂದ್ರೆ ಎಂಥಹ ಪ್ಲಾನ್ ಹಾಕಿರ್ತಾರೆ. ಮಂಗಳೂರು ಬ್ಯಾಂಕ್ ರಾಬರಿಯಲ್ಲೂ ಅದೇ ಆಗಿತ್ತು. ಖದೀಮರು ಒಂದೇ ಒಂದು ಕ್ಲೂ ಬಿಟ್ಟಿರಲಿಲ್ಲ. ಆದ್ರೆ ನಮ್ಮ ಪೊಲೀಸರು ರಂಗೋಲಿಯೊಳಗೆ ತೂರಿದ್ರು. ಒಂದು ಕಡೆ ಎಲ್ಲರಿಗೂ ಗೊತ್ತಾಗುವಂತೆ ಇನ್ವೆಸ್ಟಿಗೇಷನ್ ಮಾಡ್ತಿದ್ರೆ ಮತ್ತೊಂದು ಕಡೆ ಒಂದು ಟೀಂ ಸೈಲೆಂಟಾಗಿ ಬಾಂಬೆಯ ಧಾರಾವಿ ಸ್ಲಂಗೆ ಎಂಟ್ರಿ ಕೊಟ್ಟಿತ್ತು
ಮಂಗಳೂರು: ಅದು ಇಡೀ ರಾಜ್ಯದಲ್ಲೇ ಕಂಡು ಕೇಳರಿಯದ ಬ್ಯಾಂಕ್ ರಾಬರಿ. ಅಲ್ಲಿವರೆಗೂ ರಾಜ್ಯದಲ್ಲಿ ಅಷ್ಟು ದೊಡ್ಡ ಮಟ್ಟದಲ್ಲಿ ರಾಬರಿಯಾಗಿರಲಿಲ್ಲ. ಆವತ್ತು ಅದೊಂದು ದರೋಡೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಯಸ್ ನಾವು ಮಾತನ್ನಾಡುತ್ತಿರೋದು ಮಂಗಳೂರಿನ ಕೋಟೆಕಾರ್ ಬ್ಯಾಂಕ್ ದರೋಡೆ ಬಗ್ಗೆ.
ಈ ದರೋಡೆಯಾಗಿ ಇವತ್ತಿಗೆ 5ನೇ ದಿನ. ಕೇವಲ ಐದು ದಿನದಲ್ಲಿ ನಮ್ಮ ಪೊಲೀಸರು ದರೋಡೆಕೋರರ ಹೆಡೆಮುರಿ ಕಟ್ಟಿದ್ದಾರೆ. ಅಷ್ಟೇ ಅಲ್ಲ ಕದ್ದ ಮಾಲನ್ನ ವಾಪಸ್ ತರುತ್ತಿದ್ದಾರೆ. ಆದ್ರೆ ಇಷ್ಟು ದೊಡ್ಡ ರಾಬರಿಯನ್ನ ಮಾಡಿದ್ಯಾರು? ಅವರು ಪೊಲೀಸರ ಕೈಗೆ ತಗ್ಲಾಕಿಕೊಂಡಿದ್ದೇಗೆ ಅನ್ನೋದೇ ರೋಚಕ. ದಿ ಗ್ರೇಟ್ ರಾಬರಿ ಹಿಂದಿನ ಬಿಗ್ ಸೀಕ್ರೆಟ್ ಮತ್ತು ಪೊಲೀಸರ ಎಕ್ಸೈಟಿಂಗ್ ಇನ್ವೆಸ್ಟಿಗೇಷನ್ನೇ ಇವತ್ತಿನ ಎಫ್.ಐ.ಆರ್