Asianet Suvarna News Asianet Suvarna News

ಮುಂಬೈಯ ಸರ್ಕಾರಿ ಆಸ್ಪತ್ರೆಯಲ್ಲಿ ಶ್ರೀಮಂತ್ ಪಾಟೀಲ್! ಏನಿದು ತಂತ್ರ?

Jul 18, 2019, 4:33 PM IST

ಬೆಂಗಳೂರು/ ಮುಂಬೈ (ಜು.18): ಕಾಂಗ್ರೆಸ್ ಕ್ಯಾಂಪ್‌ನಿಂದ ಬುಧವಾರ ರಾತ್ರಿ ಏಕಾಏಕಿ ನಾಪತ್ತೆಯಾಗಿದ್ದ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಮುಂಬೈ ಸರ್ಕಾರಿ ಆಸ್ಪತ್ರೆಯಲ್ಲಿ ‘ಪತ್ತೆ’ಯಾಗಿದ್ದಾರೆ.  ಶ್ರೀಮಂತ್ ಪಾಟೀಲ್ ಅನಾರೋಗ್ಯ ಕಾರಣವನ್ನು ಹೇಳಿದ್ದರೂ, ಈ ಸಮಯದಲ್ಲಿ ಅವರ ಈ ನಡೆ ರಾಜಕೀಯ ಕುತೂಹಲಗಳನ್ನು ಹುಟ್ಟುಹಾಕಿದೆ.