ಚಾಣಕ್ಯನ ಚಾಣಾಕ್ಷ ನೀತಿ: ರಾಜ್ಯದಲ್ಲಿ ರಚನೆಯಾಗಲಿದೆ ಅಚ್ಚರಿ ಸಂಪುಟ

ಸಿಎಂ ಬಿ ಎಸ್ ಯಡಿಯೂರಪ್ಪ ಸರ್ಕಾರದ ಸಂಪುಟ ರಚನೆ ಮುಹೂರ್ತ ಫಿಕ್ಸ್ ಆಗಿದೆ. ನಾಳೆ ಅಂದ್ರೆ ಮಂಗಳವಾರ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ಆದ್ರೆ ಯಾರು ಸಚಿವರಾಗುತ್ತಾರೆ ಎನ್ನುವುದು ಮಾತ್ರ ಇನ್ನು ಸಸ್ಪೆನ್ಸ್ ಆಗಿಯೇ ಉಳಿದಿದೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಆ.19): ಸಿಎಂ ಬಿ ಎಸ್ ಯಡಿಯೂರಪ್ಪ ಸರ್ಕಾರದ ಸಂಪುಟ ರಚನೆ ಮುಹೂರ್ತ ಫಿಕ್ಸ್ ಆಗಿದೆ. ನಾಳೆ ಅಂದ್ರೆ ಮಂಗಳವಾರ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ಆದ್ರೆ ಯಾರು ಸಚಿವರಾಗುತ್ತಾರೆ ಎನ್ನುವುದು ಮಾತ್ರ ಇನ್ನು ಸಸ್ಪೆನ್ಸ್ ಆಗಿಯೇ ಉಳಿದಿದೆ. ಕೇವಲ ಸಚಿವ ರಚನೆಗೆ ಮೂಹರ್ತ ಫಿಕ್ಸ್ ಮಾಡಿದ್ದ ಅಮಿತ್ ಶಾ, ಯಾರು ಸಚಿವರಾಗಬೇಕು ಎನ್ನುವುದನ್ನು ಅಳೆದು ತೂಗಿ ಪಟ್ಟಿ ಸಿದ್ಧಪಡಿಸಿದ್ದು, ಸೋಮವಾರ ಸಂಜೆಗೆ ಶಾ ರೆಡಿ ಮಾಡಿರುವ ನೂತನ ಸಚಿವರ ಪಟ್ಟಿ ಯಡಿಯೂರಪ್ಪ ಕೈ ಸೇರಲಿದೆ. ಒಟ್ಟಿನಲ್ಲಿ ಚಾಣಕ್ಯ ಅಮಿತ್ ಶಾ ಮಾಡಿರುವ ಪಟ್ಟಿ ತೀವ್ರ ಕುತೂಹಲ ಮೂಡಿಸಿದ್ದು, ಅಚ್ಚರಿಯ ರೀತಿಯಲ್ಲಿ ರಾಜ್ಯ ಸಚಿವ ಸಂಪುಟ ರಚನೆಯಾಗುವುದಂತೂ ಪಕ್ಕಾ.

Related Video