Asianet Suvarna News Asianet Suvarna News

13 ಜಿಲ್ಲೆಯ 17 ಶಾಸಕರಿಗೆ ಮಂತ್ರಿ ಭಾಗ್ಯ; ಲಿಂಗಾಯತರಿಗೆ ಸಿಂಹಪಾಲು

Aug 20, 2019, 3:39 PM IST

ಬೆಂಗಳೂರು (ಆ.20): ಅಂತೂ ಇಂತೂ ಬಿ.ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆಯಾಗಿದೆ. 17 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಚಿವ ಸಂಪುಟದಲ್ಲಿ 13 ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ. ಬೆಂಗಳೂರಿನ 4 ಶಾಸಕರಿಗೆ ಮಂತ್ರಿ ಭಾಗ್ಯ ಸಿಕ್ಕಿದೆ. ಇನ್ನುಳಿದಂತೆ ಬೆಳಗಾವಿ ಜಿಲ್ಲೆಯಿಂದ ಇಬ್ಬರನ್ನು ಆಯ್ಕೆ ಮಾಡಲಾಗಿದೆ. ಜಾತಿವಾರು ಪ್ರಾತಿನಿಧ್ಯ ನೋಡೋದಾದರೆ, 7 ಮಂದಿ ಸಚಿವರಾಗುವ ಮೂಲಕ  ಲಿಂಗಾಯತರಿಗೆ ಸಿಂಹಪಾಲು ಸಿಕ್ಕಿದೆ. ಇನ್ನುಳಿದಂತೆ ಒಕ್ಕಲಿಗರಿಗೆ 3, ದಲಿತ ಸಮುದಾಯಕ್ಕೆ 3 ಸ್ಥಾನ ಸಿಕ್ಕಿದೆ. ಬ್ರಾಹ್ಮಣ, ಕುರುಬ, ವಾಲ್ಮೀಕಿ, ಈಡಿಗ ಸಮಾಜದ ತಲಾ ಒಬ್ಬರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ. ಮಹಿಳಾ ಕೋಟಾದಲ್ಲಿ ನಿಪ್ಪಾಣಿಯ ಶಶಿಕಲಾ ಜೊಲ್ಲೆ ಸಂಪುಟ ಸೇರಿದ್ದಾರೆ.  

Video Top Stories