
ಕರುನಾಡ ಚಕ್ರವರ್ತಿ ಎದುರೇ ಈ ಗತಿ! ಹೀಗ್ಯಾಕಾದ್ರು ಶಿವಣ್ಣ, ಫ್ಯಾನ್ಸ್ ಬೇಸರ!
ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್ ನಂತರ ಶಿವರಾಜ್ಕುಮಾರ್ ಕನ್ನಡ ಚಿತ್ರರಂಗದ ನಾಯಕತ್ವ ವಹಿಸಬೇಕು ಅನ್ನೋದು ಎಲ್ಲರ ನಿರೀಕ್ಷೆಯಾಗಿತ್ತು. ಆದ್ರೆ ಅದ್ಯಾಕೋ ಶಿವಣ್ಣ ನಾಯಕತ್ವದ ಹೊಣೆ ಹೊರಲಿಲ್ಲ.
ಶಿವಣ್ಣನನ್ನ ಕರುನಾಡ ಚಕ್ರವರ್ತಿ ಅಂತ ಕರೀತಾರೆ ಕನ್ನಡ ಸಿನಿಪ್ರಿಯರು. ಬರೊಬ್ಬರಿ ನಾಲ್ಕು ದಶಕದಿಂದ ಕನ್ನಡ ಚಿತ್ರರಂಗದಲ್ಲಿರೋ ಶಿವಣ್ಣ, ತಂದೆ ತಕ್ಕ ಮಗ. ನಿರಂತರವಾಗಿ ಸಿನಿಮಾಗಳನ್ನ ಮಾಡ್ತಾ ಕನ್ನಡ ಕಲಾಸೇವೆ ಮಾಡಿಕೊಂಡು ಬಂದಿರೋ ದೊರೆಗೆ ಕನ್ನಡ ಕಲಾರಸಿಕರು ಕೊಟ್ಟಿರುವ ಬಿರುದೇ ಕರುನಾಡ ಚಕ್ರವರ್ತಿ.