ಬಿಜೆಪಿಗೆ ನಡ್ಡಾ ಬಾಸ್, ಅಧಿಕಾರಕ್ಕೇರಿದ ಜೂ. ಅಮಿತ್ ಶಾ!

ಬಿಜೆಪಿಗೆ ಜೆಪಿ ನಡ್ಡಾ ಸಾರಥ್ಯ/ ಅಮಿತ್ ಶಾ ಜಾಗಕ್ಕೆ ನಡ್ಡಾ/ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆ/ ಹಿರಿಯ ನಾಯಕರಿಂದ ನಡ್ಡಾ ಹೆಸರು ಅನುಮೋದನೆ

Share this Video
  • FB
  • Linkdin
  • Whatsapp

ನವದೆಹಲಿ ( ಜ. 20) ಆಡಳಿತಾರೂಢ ಬಿಜೆಪಿಯ 11ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಜಗತ್ ಪ್ರಕಾಶ್ ನಡ್ಡಾ ಅವರು ಸೋಮವಾರ ಅವಿರೋಧ ಆಯ್ಕೆಯಾಗಿದ್ದಾರೆ. ಹಲವು ದಿನಗಳ ಹಿಂದೆಯೇ ಜೆಪಿ ನಡ್ಡಾ ಆಯ್ಕೆ ಖಚಿತವಾಗಿತ್ತು.

ಬಿಜೆಪಿ ನೂತನ ಅಧ್ಯಕ್ಷ ಸ್ಥಾನಕ್ಕೆ ನಡೆದ ನಾಮನಿರ್ದೇಶನ ಪ್ರಕ್ರಿಯೆಯ ನಂತರ ಕಣದಲ್ಲಿದ್ದ ಏಕೈಕ ನಾಯಕ ಜೆಪಿ ನಡ್ಡಾ ಅವರ ಉಮೇದುವಾರಿಕೆಯನ್ನು ಪಕ್ಷದ ಉನ್ನತ ನಾಯಕರು ಅನುಮೋದಿಸಿದರು. ಆ ಮೂಲಕ ಅಮಿತ್ ಶಾ ಅವರ ಜಾಗಕ್ಕೆ ನಡ್ಡಾ ಬಂದಿದ್ದಾರೆ.

ಯಾರಿವರು ಜೂ. ಅಮಿತ್ ಶಾ

ಜೆಪಿ ನಡ್ಡಾ ಅವರು ಮೂರು ವರ್ಷಗಳ ಅವಧಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಉಸ್ತುವಾರಿಯಾಗಿದ್ದ ಬಿಜೆಪಿ ಹಿರಿಯ ನಾಯಕ ರಾಧಾ ಮೋಹನ್ ಸಿಂಗ್ ಘೋಷಣೆ ಮಾಡಿದ್ದಾರೆ.

ಜನವರಿ 20ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Related Video