ಸಜೀವ ಬಾಂಬ್‌ಗೆ ಬೆಚ್ಚಿ ಬಿದ್ದ ಮಂಗ್ಳೂರ್, ವಿಜಿಗೆ ಸಂಕಷ್ಟ ತಂದ ತಲ್ವಾರ್; ಜ.20ರ ಟಾಪ್ 10 ಸುದ್ದಿ!
ಮಂಗಳೂರಿನ ವಿಮಾನ ನಿಲ್ದಾಣ ಬಳಿ ಸಿಕ್ಕ ಬಾಂಬ್‌ನ್ನು ಕೆಂಜಾರು ಮೈದಾನಕ್ಕೆ ಸಾಗಿಸಿ ನಿಷ್ಕ್ರೀಯಗೊಳಿಸುವ ಪ್ರಯತ್ನದ ಬೆನ್ನಲ್ಲೇ ಮತ್ತೆರಡು ಕಡೆ ಸಜೀವ ಬಾಂಬ್ ಪತ್ತೆಯಾಗಿದ್ದು, ಕರಾವಳಿ ಜನರನ್ನು ಬೆಚ್ಚಿ ಬೀಳಿಸಿದೆ. ಇತ್ತ ದುನಿಯಾ ವಿಜಿ ಹುಟ್ಟು ಹಬ್ಬಕ್ಕೆ ಕೇಕ್ ಕತ್ತರಿಸಿ ವಿವಾದಕ್ಕೆ ಸಿಲುಕಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಅಮಿತ್ ಶಾ ನಿರ್ಗಮಿಸಿದ್ದು, ನೂತನ ಅಧ್ಯಕ್ಷರ ಆಯ್ಕೆಯಾಗಿದೆ. ರಾಜಕೀಯಕ್ಕೆ ಬಿಎಸ್‌ವೈ ಗುಡ್ ಬೈ, ಕೊಲೆಯಲ್ಲಿ ಅಂತ್ಯವಾದ ಪ್ರೇಮ ಪ್ರಕರಣ ಸೇರಿದಂತೆ ಜನವರಿ 20ರ ಟಾಪ್ 10 ಸುದ್ದಿ ಇಲ್ಲಿವೆ.
ಅಮಿತ್ ಶಾ ಜಾಗಕ್ಕೆ ಜೆಪಿ ನಡ್ಡಾ, ಬಿಜೆಪಿಗೆ ಇನ್ಮುಂದೆ ಜೆಪಿ ಬಾಸ್...
ಆಡಳಿತಾರೂಢ ಬಿಜೆಪಿಯ 11ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಜಗತ್ ಪ್ರಕಾಶ್ ನಡ್ಡಾ ಅವರು ಸೋಮವಾರ ಅವಿರೋಧ ಆಯ್ಕೆಯಾಗಿದ್ದಾರೆ. ಹಲವು ದಿನಗಳ ಹಿಂದೆಯೇ ಜೆಪಿ ನಡ್ಡಾ ಆಯ್ಕೆ ಖಚಿತವಾಗಿತ್ತು. ಇದೀಗ ಇಷ್ಟು ದಿನ ಅಮಿತ್ ಶಾ ಬಿಜೆಪಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದರೆ, ಇದೀಗ ಜೆಪಿ ನಡ್ಡಾ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಮಂಗಳೂರು ಕೆಂಜಾರು ಮೈದಾನದಲ್ಲಿ ಬಾಂಬ್ ನಿಷ್ಕ್ರಿಯ ಪ್ರಕ್ರಿಯೆ!
ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಬಾಂಬನ್ನು ಸದ್ಯ ಕೆಂಜಾರು ಮೈದಾನಕ್ಕೆ ಯಶಸ್ವಿಯಾಗಿ ಸ್ಥಳಾಂತರಿಸಲಾಗಿದ್ದು, ಇಲ್ಲಿ ನಿಷ್ಕ್ರಿಯಗೊಳಿಸುವ ಕಾರ್ಯಾಚರಣೆ ಆರಂಭಿಸಲಾಗಿದೆ.
ಮಂಗಳೂರು ಏರ್ಪೋರ್ಟ್ನಲ್ಲಿ ಸಜೀವ ಬಾಂಬ್ ಪತ್ತೆ!
ಮಂಗಳೂರು ಏರ್ಪೋರ್ಟ್ನಲ್ಲಿ ಸಜೀವ ಬಾಂಬ್ ಪತ್ತೆಯಾಗಿದೆ. ಏರ್‌ಪೋರ್ಟ್ ಸುತ್ತಮುತ್ತ ಪೊಲೀಸರು ಸುತ್ತುವರೆದಿದ್ದು, ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಲಾಗಿದೆ.
ಭಾರತಕ್ಕೆ ಸಿಎಎ ಅಗತ್ಯವೇ ಇರಲಿಲ್ಲ: ಬಾಂಗ್ಲಾ ಪ್ರಧಾನಿ
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ಭಾರತದ ಆಂತರಿಕ ವಿಚಾರ ಎಂದು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಹೇಳಿಕೆ ನೀಡಿದ್ದಾರೆ. ಗಲ್‌್ಫ ನ್ಯೂಸ್‌ಗೆ ಸಂದರ್ಶನವೊಂದನ್ನು ನೀಡಿರುವ ಶೇಖ್ ಹಸೀನಾ,‘ಭಾರತ ಸರ್ಕಾರ ಏಕೆ ಪೌರತ್ವ ಕಾಯ್ದೆ ಜಾರಿಗೊಳಿಸಿದೆ ಎಂಬುದು ಗೊತ್ತಿಲ್ಲ. ಅದರ ಅಗತ್ಯವೇ ಇರಲಿಲ್ಲ’ ಎಂದು ಹೇಳಿದ್ದಾರೆ.
ತಲ್ವಾರ್‌ನಿಂದ ಕೇಕ್ ಕಟ್; ಕ್ಷಮೆಯಾಚಿಸಿದ ದುನಿಯಾ ವಿಜಿ..!
ಬರ್ತಡೇ ಕೇಕನ್ನು ತಲ್ವಾರ್‌ನಿಂದ ಕತ್ತರಿಸಿದ್ದಕ್ಕೆ ದುನಿಯಾ ವಿಜಯ್ ಕ್ಷಮೆಯಾಚಿಸಿದ್ದಾರೆ. 'ರಾತ್ರಿ ಕೇಕ್ ಕಟ್ ಮಾಡುವಾಗ ಯಾರೋ ನನ್ನ ಕೈಗೆ ಕತ್ತಿ ಕೊಟ್ಟರು. ನಾನು ಮಾಡಿದ ಕೆಲಸ ತಪ್ಪು, ಅದನ್ನು ಒಪ್ಪಿಕೊಳ್ತೀನಿ. ತಪ್ಪು ಯಾರು ಮಾಡಿದ್ರೂ ಅದು ತಪ್ಪೇ. ಯಾರೂ ಪ್ರಚೋದನೆಗೆ ಒಳಗಾಗ್ಬೇಡಿ. ಪೊಲೀಸರು ಕರೆದ್ರೆ ಹೋಗಿ ಹೇಳಿಕೆ ಕೊಡ್ತೀನಿ' ಎಂದು ದುನಿಯಾ ವಿಜಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಒಂದಲ್ಲ 3 ಕಡೆ ಬಾಂಬ್: ವಿಮಾನ ಸ್ಥಗಿತಗೊಳಿಸಿ ತಪಾಸಣೆ!
ಇಂದು ಸೋಮವಾರ ಬೆಳಗ್ಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೀವಂತ್ ಬಾಂಬ್ ಪತ್ತೆಯಾಗಿದ್ದು, ಕರಾವಳಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ ಪೊಲೀಸರು, ವಿಮಾನ ನಿಲ್ದಾಣವನ್ನು ಸುತ್ತುವರೆದು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಈಗಾಗಲೇ ವಿಮಾನ ನಿಲ್ದಾಣದಿಂದ ಬಾಂಬನ್ನು ಕೆಂಜಾರು ಮೈದಾನಕ್ಕೆ ಯಶಶಸ್ವಿಯಾಗಿ ರವಾನಿಸಲಾಗಿದ್ದು, ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಆದರೀಗ ಈ ಆತಂಕದ ನಡುವೆಯೇ ಮತ್ತೊಂದು ಶಾಕಿಂಗ್ ಸುದ್ದಿ ಬಂದೆರಗಿದೆ.
40 ವರ್ಷ ಹಿಂದೆ ನಾಪತ್ತೆ ಆದವ ಫೇಸ್ಬುಕ್‌ನಿಂದ ಪತ್ತೆ!
40 ವರ್ಷಗಳ ಹಿಂದೆ ನಾಪತ್ತೆ ಆಗಿದ್ದ ಬಾಂಗ್ಲಾದೇಶದ ವ್ಯಕ್ತಿಯೊಬ್ಬ ಫೇಸ್‌ಬುಕ್ ವಿಡಿಯೋವೊಂದರ ಸಹಾಯದಿಂದ ತನ್ನ ಕುಟುಂಬವನ್ನು ಮತ್ತೆ ಸೇರಿಕೊಂಡ ಬಲು ಅಪರೂಪದ ಘಟನೆಯೊಂದು ಜರುಗಿದೆ.
ಅಶ್ಲೀಲ ಚಿತ್ರ ವೀಕ್ಷಣೆಗೆ ಕಾಶ್ಮೀರಿಗಳಿಂದ ಇಂಟರ್ನೆಟ್ ಬಳಕೆ: ಸಾರಸ್ವತ್ ಎಡವಟ್ಟು!
370ನೇ ವಿಧಿ ರದ್ದಾದ ಬಳಿಕ ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆ ಬಂದ್ ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಮರ್ಥಿಸುವ ಭರದಲ್ಲಿ, ಕಾಶ್ಮೀರಿಗಳು ಅಶ್ಲೀಲ ಚಿತ್ರಗಳನ್ನು ನೋಡಲು ಮಾತ್ರ ಇಂಟರ್ನೆಟ್ ಬಳಸುತ್ತಾರೆ ಎಂದು ಹೇಳಿ ನೀತಿ ಆಯೋಗದ ಸದಸ್ಯ ಹಾಗೂ ವಿಜ್ಞಾನಿ ವಿ.ಕೆ ಸಾರಸ್ವತ್ ಎಡವಟ್ಟು ಮಾಡಿಕೊಂಡಿದ್ದಾರೆ.
ಒಬ್ಬಳ ಮೇಲೆ ಇಬ್ಬರಿಗೆ ಲವ್ : ಕೊಲೆಯಲ್ಲಿ ಅಂತ್ಯವಾಯ್ತು ಪ್ರೇಮ ಪ್ರಕರಣ
ಬ್ಬರು ಯುವಕರಿಗೆ ಒಬ್ಬಳ ಮೇಲೆಯೇ ಲವ್. ಆದ್ರೆ ಇದು ಅಂತ್ಯವಾಗಿದ್ದು ಮಾತ್ರ ದಾರುಣವಾಗಿ. ಅವಳು ನಂಗೇ ಬೇಕು ಎಂದು ಓಬ್ಬ ಮತ್ತೊಬ್ಬನನ್ನು ಕೊಂದೇ ಬಿಟ್ಟಿದ್ದಾನೆ.
ಚುನಾವಣಾ ರಾಜಕೀಯಕ್ಕೆ ಬಿಎಸ್‌ವೈ ಗುಡ್‌ಬೈ: ಗುಟ್ಟು ಬಿಚ್ಚಿಟ್ಟ ಆರೆಸ್ಸೆಸ್ ನಾಯಕ
ಚುನಾವಣಾ ರಾಜಕೀಯದಿಂದ ಬಿ.ಎಸ್. ಯಡಿಯೂರಪ್ಪ ನಿವೃತ್ತಿಯಾಗುತ್ತಾರಂತೆ. ಬಳಿಕ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ. ಹೀಗಂತ ಖುದ್ದುಆರೆಸ್ಸೆಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.