JDS ಸೇರುವಂತೆ ಬಿಜೆಪಿ ಅಸಮಾಧಾನಿತ ಶಾಸಕನಿಗೆ ಆಹ್ವಾನ: ಆಪರೇಷನ್ ಶುರು?

 ಅಸಮಾಧಾನಗೊಂಡಿರುವ ಶಾಸಕನನ್ನು ಜೆಡಿಎಸ್ ಎಂಎಲ್ಸಿ ಬಸವರಾಜ್ ಹೊರಟ್ಟಿ ಭೇಟಿ ಮಾಡಿದ್ದು, ಮರಳಿ ಮನೆಗೆ ಬರುವಂತೆ ಆಹ್ವಾನ ನೀಡಿದ್ದಾರೆ. 

First Published Aug 21, 2019, 6:47 PM IST | Last Updated Aug 21, 2019, 6:47 PM IST

ಬೆಂಗಳೂರು, [ಆ.21]:  ಸಿಎಂ  ಬಿ.ಎಸ್. ಯಡಿಯುರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೆ ಅಸಮಾಧಾನ ಸ್ಫೋಟಗೊಂಡಿದೆ. ಮುಂದಿನ ಸಚಿವ ಸಂಪುಟ ವಿಸ್ತರಣೆ ಒಳಗೆ ನನಗೆ ಮಂತ್ರಿ ಸ್ಥಾನ ಸಿಗದಿದ್ದರೆ ನನ್ನ ನಡೆ ಮನೆ ಕಡೆಗೆ ಎಂದು ಬಿಜೆಪಿ ಹಿರಿಯ ಶಾಸಕರೊಬ್ಬರು ಪಕ್ಷಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದರ ನಡುವೆ ಅಸಮಾಧಾನಗೊಂಡಿರುವ ಶಾಸಕನನ್ನು ಜೆಡಿಎಸ್ ಎಂಎಲ್ಸಿ ಬಸವರಾಜ್ ಹೊರಟ್ಟಿ ಭೇಟಿ ಮಾಡಿದ್ದು, ಮರಳಿ ಮನೆಗೆ ಬರುವಂತೆ ಆಹ್ವಾನ ನೀಡಿದ್ದಾರೆ.  ಜೆಡಿಎಸ್ ಸೇರುವಂತೆ ಆಹ್ವಾನ ನೀಡಿರುವುದು ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ. ಯಾರು ಆ ಶಾಸಕ? ವಿಡಿಯೋನಲ್ಲಿ ನೋಡಿ.

Video Top Stories