Asianet Suvarna News Asianet Suvarna News

ಮತ್ತೊಂದು ಸರ್ಜಿಕಲ್ ಸ್ಟ್ರೈಕ್: POK ಒಳನುಗ್ಗಿದ ಸೇನೆ?

Aug 3, 2019, 6:29 PM IST

ಶ್ರೀನಗರ(ಆ.03): ಭಾರತದಿಂದ ಮತ್ತೊಂದು ಸರ್ಜಿಕಲ್​ ದಾಳಿ ನಡೆದಿದೆ ಎನ್ನಲಾಗಿದ್ದು, ಭಾರತೀಯ ಸೇನೆ ಪಾಕ್​ ಆಕ್ರಮಿತ ಕಾಶ್ಮೀರದ ಒಳಗೆ ಸುಮಾರು 30 ಕಿ.ಮೀ ನುಗ್ಗಿ ದಾಳಿ ನಡೆಸಿದೆ. ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದ್ದು, ಫಿರಂಗಿಗಳ ಮೂಲಕ ಭಾರತೀಯ ಸೇನೆ ದಾಳಿ ಮಾಡಿದೆ ಎನ್ನಲಾಗಿದೆ. ಇನ್ನು ದಾಳಿಯಿಂದ ಪಾಕಿಸ್ತಾನದ ಜಲವಿದ್ಯುತ್​ ಯೋಜನೆ ಆಗಿರುವ ನೀಲಂ-ಝೇಲಂ ಪ್ರಾಜೆಕ್ಟ್’ಗೆ ಹಾನಿಯಾಗಿದೆ. ಭಾರತೀಯ ಸೇನೆಯ ಏಕಾಏಕಿ ದಾಳಿಯಿಂದ ಸ್ಥಳೀಯ ಪಾಕ್ ನಾಗರಿಕರು ಬೆಚ್ಚಿ ಬಿದ್ದಿದ್ದು, ಅಡಗುತಾಣಗಳಿಂದ ಉಗ್ರರು ಕೂಡ ಪರಾರಿಯಾಗಿದ್ದಾರೆ. ಇದೇ ವೇಳೆ ಭಾರತೀಯ ಸೇನೆ ಕದನ ವಿರಾಮ ಉಲ್ಲಂಘಿಸಿದ್ದಲ್ಲದೇ ಅಕ್ರಮವಾಗಿ ಪಾಕ್ ನೆಲಕ್ಕೆ ಕಾಲಿಟ್ಟಿದೆ ಎಂದು ಪಾಕಿಸ್ತಾನ ಆರೋಪ ಮಾಡಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..