'ಕುಮಾರಸ್ವಾಮಿಯೇ ಒಳಒಪ್ಪಂದದ ಪ್ರಿನ್ಸಿಪಾಲ್'; ಮಾಜಿ ಶಾಸಕ ಲೇವಡಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಆಸ್ತಿಯಿದ್ದಂತೆ ಎಂದು ಸಿದ್ದು ಪರ ರಾಜಣ್ಣ ಬ್ಯಾಟ್ ಬೀಸಿದ್ದಾರೆ. ಸಿದ್ದರಾಮಯ್ಯನವರು ತಮ್ಮ ಕ್ಷೇತ್ರಕ್ಕೆ ಸೀಮಿತವಾಗಿ ಒಳಒಪ್ಪಂದದ ಬಗ್ಗೆ ಹೇಳಿದ್ದಾರೆಯಷ್ಟೇ ಎಂದು ಸಮರ್ಥಿಸಿಕೊಂಡಿದ್ದಾರೆ.

First Published Dec 20, 2020, 4:58 PM IST | Last Updated Dec 20, 2020, 4:58 PM IST

ಬೆಂಗಳೂರು(ಡಿ.20): ಎಚ್. ಡಿ. ಕುಮಾರಸ್ವಾಮಿಯೇ ಒಳ ಒಪ್ಪಂದದ ಪ್ರಿನ್ಸಿಪಾಲ್. ಅವರು ಎಲ್ಲಾ ಪಾರ್ಟಿಯವರ ಜತೆ ಒಳ ಒಪ್ಪಂದ ಮಾಡಿಕೊಳ್ಳುತ್ತಾರೆ ಎಂದು ಮಾಜಿ ಶಾಸಕ ಕೆ.ಎನ್. ರಾಜಣ್ಣ ಲೇವಡಿ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಆಸ್ತಿಯಿದ್ದಂತೆ ಎಂದು ಸಿದ್ದು ಪರ ರಾಜಣ್ಣ ಬ್ಯಾಟ್ ಬೀಸಿದ್ದಾರೆ. ಸಿದ್ದರಾಮಯ್ಯನವರು ತಮ್ಮ ಕ್ಷೇತ್ರಕ್ಕೆ ಸೀಮಿತವಾಗಿ ಒಳಒಪ್ಪಂದದ ಬಗ್ಗೆ ಹೇಳಿದ್ದಾರೆಯಷ್ಟೇ ಎಂದು ಸಮರ್ಥಿಸಿಕೊಂಡಿದ್ದಾರೆ.

ಸಿದ್ದರಾಮಯ್ಯ ಸಮಾಜವಾದಿಯಲ್ಲ, ಮಜವಾದಿ: ಸಿ ಟಿ ರವಿ ಲೇವಡಿ

ಈ ಹಿಂದೆ ಸಿದ್ದರಾಮಯ್ಯ ತಾವು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಲು ಕಾರಣ ಅಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮಾಡಿಕೊಂಡ ಒಳಒಪ್ಪಂದವೇ ಕಾರಣ. ಇದಷ್ಟೇ ಅಲ್ಲದೇ ನಮ್ಮ ಪಕ್ಷದವರು ನನಗೆ ಮೋಸ ಮಾಡಿದರು ಎಂದು ಆರೋಪಿಸಿದ್ದರು. ಈ ಕುರಿತಂತೆ ರಾಜ್ಯರಾಜಕಾರಣದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.