Asianet Suvarna News Asianet Suvarna News

ಸೈನಿಕನೊಂದಿಗೆ ಬೆಳಗಾವಿಗೆ ಡಿಕೆಶಿ ಎಂಟ್ರಿ: ರಮೇಶ್ ಹಣಿಯಲು ಮಾಸ್ಟರ್ ಪ್ಲಾನ್‌

Aug 2, 2019, 6:06 PM IST

ಬೆಳಗಾವಿ\ಬೆಂಗಳೂರು (ಆ.02): ಬೆಳಗಾವಿ ರಾಜಕೀಯಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮೂಗು ತೂರಿಸಿದಕ್ಕೆ ಜಾರಕಿಹೊಳಿ ಬ್ರದರ್ಸ್  ಉರಿದುಬಿದ್ದು ರಾದ್ಧಾಂತ ಮಾಡಿರುವುದು ಇಡೀ ರಾಜ್ಯವೇ ನೋಡಿದೆ. ಅಷ್ಟೇ ಅಲ್ಲದೇ ಬೆಳಗಾವಿ ಜಿಲ್ಲೆಗೆ ಡಿಕೆಶಿ ಎಂಟ್ರಿಕೊಟ್ಟಿದ್ದಕ್ಕೆ ಜಾರಕಿಹೊಳಿ ಬ್ರದರ್ಸ್ ಮೈತ್ರಿ ಸರ್ಕಾರವನ್ನು ಬಿಟ್ಟುಬಿಡದೇ ಕಾಡಿದ್ದರು. ಕೊನೆಗಳಿಗೆಯಲ್ಲಿ ಸತೀಶ್ ಜಾರಕಿಹೊಳಿ ಸೈಲೆಂಟ್ ಆದ್ರೆ ರಮೇಶ್ ಜಾರಕಿಹೊಳಿ ಮಾತ್ರ ಮೈತ್ರಿ ಸರ್ಕಾರದಲ್ಲಿ ಹುಳಿ ಹಿಂಡಿದ್ದರು. ಅದು ಒಂದು ರೀತಿಯಲ್ಲಿ ಮೈತ್ರಿ ಸರ್ಕಾರದ ಅವನತಿಗೂ ಕಾರಣವಾಗಿತ್ತು ಎಂದರೆ ತಪ್ಪಾಗಲಾರದು. ಇದೀಗ ಮೈತ್ರಿ ಸರ್ಕಾರ ಮುರಿದುಬೀಳಲು ಕಾರಣವಾಗಿರುವ ರಮೇಶ್ ಜಾರಕಿಹೊಳಿಯನ್ನು ಹಣಿಯಲು ಮಾಸ್ಟರ್ ಪ್ಲಾನ್‌ನೊಂದಿಗೆ ಮತ್ತೆ ಕನಕಪುರ ಬಂಡೆ ಬೆಳಗಾವಿ ಪಾಲಿಟಿಕ್ಸ್‌ಗೆ ಲಗ್ಗೆ ಇಡುತ್ತಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಏನದು ಮಾಸ್ಟರ್ ಪ್ಲಾನ್..? ವಿಡಿಯೋದಲ್ಲಿ ನೋಡಿ.