Asianet Suvarna News Asianet Suvarna News

‘ತೆಪ್ಪದಲ್ಲಿ ಕೋತಿ ಕೂತ ಹಾಗಿದೆ ಮೈತ್ರಿ ಸರ್ಕಾರ ಸ್ಥಿತಿ’

Jul 2, 2019, 2:30 PM IST

ಬೆಂಗಳೂರು (ಜು.02): ಮೈತ್ರಿ ಸರ್ಕಾರವನ್ನು ಕೋತಿಗಳು ಕೂತಿರುವ ತೆಪ್ಪಕ್ಕೆ ಹೋಲಿಸಿರುವ ಬಿಜೆಪಿ ನಾಯಕ ಜೆ.ಸಿ. ಮಾಧುಸ್ವಾಮಿ, ಸರ್ಕಾರ ಬೀಳೋದು ಖಚಿತ ಎಂದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಪ್ರಸಕ್ತ ರಾಜ್ಯ ರಾಜಕೀಯದ ಬಗ್ಗೆ ಮಾತನಾಡಿದ ಚಿಕ್ಕನಾಯಕನಹಳ್ಳಿ ಶಾಸಕ, ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಅದನ್ನು ಯಾರಾದ್ರೂ ಏರಕ್ಕೆ ಹೋಗ್ತಾರಾ? ಎಂದು ಪ್ರಶ್ನಿಸಿದರು.

ತೆಪ್ಪದಲ್ಲಿ ಕೂತಿರುವ ಕೋತಿಗಳು ಯಾವ ಕಡೆ ವಾಲಿದ್ರೂ ತೆಪ್ಪ ಮುಳುಗೋದು ಮಾತ್ರ ಗ್ಯಾರಂಟಿ ಎಂದು ಮಾಧುಸ್ವಾಮಿ ಹೇಳಿದರು.