ಶಪಥ ಈಡೇರಿಸಿದ ಅಭಿಮಾನಿಗೆ ಹೊಸ ಚಪ್ಪಲಿ ಕೊಡಿಸಲಿರುವ ಯಡಿಯೂರಪ್ಪ!

ಕಳೆದ ವರ್ಷ ಯಡಿಯೂರಪ್ಪ ಸಿ.ಎಂ ಸ್ಥಾನದಿಂದ ಕೆಳಗಿಳಿದಾಗ, ಅವರು ಮತ್ತೆ ಸಿಎಂ ಆಗೋವರೆಗೂ ಚಪ್ಪಲಿ ತೊಡುವುದಿಲ್ಲವೆಂದು ಮಂಡ್ಯ ತಾಲೂಕಿನ ಉಪ್ಪರಕನಹಳ್ಳಿಯ ಅಭಿಮಾನಿ ಶಿವಕುಮಾರ್ ಆರಾಧ್ಯ‌‌‌‌ ಶಪಥ ಮಾಡಿದ್ದರು.

Share this Video
  • FB
  • Linkdin
  • Whatsapp

ಮಂಡ್ಯ (ಜು.27): ರಾಜ್ಯದ ಸಿಎಂ ನಿವೇಶನ ಕೊಡಿಸೋದು, ಮನೆ ಕೊಡಿಸೋದು, ಉದ್ಯೋಗ ಕೊಡಿಸೋದು ಕೇಳಿರ್ತೀವಿ. ಆದರೆ ನೂತನ ಸಿಎಂ ಯಡಿಯೂರಪ್ಪನೋರು ತಮ್ಮ ಅಭಿಮಾನಿಗೆ ಹೊಸ ಚಪ್ಪಲಿ ಕೊಡಿಸುವ ಭರವಸೆ ನೀಡಿದ್ದಾರೆ.

ಕಳೆದ ವರ್ಷ ಯಡಿಯೂರಪ್ಪ ಸಿ.ಎಂ ಸ್ಥಾನದಿಂದ ಕೆಳಗಿಳಿದಾಗ, ಅವರು ಮತ್ತೆ ಸಿಎಂ ಆಗೋವರೆಗೂ ಚಪ್ಪಲಿ ತೊಡುವುದಿಲ್ಲವೆಂದು ಮಂಡ್ಯ ತಾಲೂಕಿನ ಉಪ್ಪರಕನಹಳ್ಳಿಯ ಅಭಿಮಾನಿ ಶಿವಕುಮಾರ್ ಆರಾಧ್ಯ‌‌‌‌ ಶಪಥ ಮಾಡಿದ್ದರು.

ಶಪಥದಂತೆ ಕಳೆದ 14 ತಿಂಗಳಿಂದ ಚಪ್ಪಲಿ ಇಲ್ಲದೆ ಬರಿಗಾಲಲ್ಲಿ ತಿರುಗಾಡ್ತಿದ್ದ ಶಿವಕುಮಾರ್ ಆರಾಧ್ಯ, ಇಂದು ಹುಟ್ಟೂರು ಬೂಕನಕೆರೆಗೆ ಬಂದಿದ್ದ ಸಿಎಂರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ರು. ಈ ಸಂದರ್ಭದಲ್ಲಿ ತಮ್ಮ ಶಪಥವನ್ನು ತಿಳಿಸಿದ್ರು. ಅಭಿಮಾನಿಯ ಪ್ರೀತಿಯನ್ನು ಕಂಡು ಬಿಎಸ್‌ವೈ ಸಂತಸಪಟ್ಟರು. 

ನಿನ್ನ ಶಪಥ ಈಡೇರಿದ್ದು, ಈ ವಾರದೊಳಗೆ ನಾನೇ ನಿನಗೆ ಹೊಸ ಚಪ್ಪಲಿ ಕೊಡಿಸುವುದಾಗಿ ಯಡಿಯೂರಪ್ಪ ಅಭಿಮಾನಿಗೆ ಭರವಸೆ ಕೂಡಾ ಕೊಟ್ರು. ಸಿಎಂ ‌ಕೊಟ್ಟ ಭರವಸೆಯನ್ನು ಮಾಧ್ಯಮಗಳ ಮುಂದೆ ಬಿಟ್ಟಿಟ್ಟು ಅಭಿಮಾನಿ ಶಿವಕುಮಾರ್ ಆರಾಧ್ಯ ಸಂಭ್ರಮಿಸಿದ್ದು ಹೀಗೆ...

Related Video