ಉಪಸಮರಕ್ಕಾಗಿ ಬಿಜೆಪಿಯೊಳಗೆ ಮಿನಿಸಮರ: ಟಿಕೆಟ್‌ಗಾಗಿ ತಿರಗ್ತಿದ್ದಾರೆ ಗಿರಗಿರ!

ಉಪಚುನಾವಣೆ ಘೋಷಣೆಯಾಗುತ್ತಿದ್ದಂತೇ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಅಸಮಧಾನ ಭುಗಿಲೆದ್ದಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿಂದ ಟಿಕೆಟ್‌ಗಾಗಿ ಒತ್ತಡ ಹೆಚ್ಚಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು(ಸೆ.26): ಉಪಚುನಾವಣೆ ಘೋಷಣೆಯಾಗುತ್ತಿದ್ದಂತೇ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಅಸಮಧಾನ ಭುಗಿಲೆದ್ದಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿಂದ ಟಿಕೆಟ್‌ಗಾಗಿ ಒತ್ತಡ ಹೆಚ್ಚಾಗಿದೆ. ಕೆ.ಆರ್.ಪುರಂನಲ್ಲಿ ಭೈರತಿ ಬಸವರಾಜ್‌ಗೆ ಟಿಕೆಟ್ ನೀಡದಂತೆ ಒತ್ತಾಯಿಸಿದ್ದು, ನಂದೀಶ್ ರೆಡ್ಡಿಗೆ ಟಿಕೆಟ್ ನೀಡುವಂತೆ ಬೆಂಬಲಿಗರು ಒತ್ತಾಯಿಸಿದ್ದಾರೆ. ಇಂದು ಕೆ.ಆರ್.ಪುರಂನಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ನಡೆದ ನಂದೀಶ್ ರೆಡ್ಡಿ ಬೆಂಬಲಿಗರ ಸಭೆಯಲ್ಲಿ ಟಿಕೆಟ್‌ಗಾಗಿ ಒತ್ತಾಯಿಸಲಾಗಿತ್ತು. 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...

Related Video