ಹೊಸ ವರ್ಷದ ಸಂಭ್ರಮಾಚರಣೆಗೆ ಕ್ಷಣಗಣನೆ: 'ಮದುವಣಗಿತ್ತಿ' ಸಿಲಿಕಾನ್ ಸಿಟಿಗೆ ಭಾರೀ ಭದ್ರತೆ!
ಸುರಕ್ಷತೆಯ ದೃಷ್ಟಿಯಿಂದ ಬ್ರಿಗೇಡ್ ರಸ್ತೆಯುದ್ದಕ್ಕೂ ಪ್ರತಿ 30 ಮೀಟರ್‌ಗೆ ನಾಲ್ಕು ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಬಿಬಿಎಂಪಿಯ 150 ಸಿಸಿ ಕ್ಯಾಮರಾ ಜತೆಗೆ ಬ್ರಿಗೇಡ್ ಹಾಗೂ ಎಂಜಿ ರೋಡ್‌ನಲ್ಲಿ 800ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಅಳವಡಿಸಲಾಗಿದೆ.
ಬೆಂಗಳೂರು: 2024ಕ್ಕೆ ಬೈ ಬೈ ಹೇಳಿ 2025ಕ್ಕೆ ಹಾಯ್ ಹೇಳುವ ಸಮಯ ಬಂದೇ ಬಿಟ್ಟಿದೆ. ಹೊಸ ವರ್ಷದ ಸಂಭ್ರಮಾಚರಣೆಗೆ ಸಿಲಿಕಾನ್ ಸಿಟಿ ಬೆಂಗಳೂರು ಮದುವಣಗಿತ್ತಿಯಂತೆ ಸಜ್ಜಾಗಿದೆ. ಪ್ರತಿ ವರ್ಷದಂತೆ ಹೊಸ ವರ್ಷವನ್ನು ಸ್ವಾಗತಿಸಲು ಬ್ರಿಗೇಡ್ ರೋಡ್ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.
ಇನ್ನು ಸುರಕ್ಷತೆಯ ದೃಷ್ಟಿಯಿಂದ ಬ್ರಿಗೇಡ್ ರಸ್ತೆಯುದ್ದಕ್ಕೂ ಪ್ರತಿ 30 ಮೀಟರ್‌ಗೆ ನಾಲ್ಕು ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಬಿಬಿಎಂಪಿಯ 150 ಸಿಸಿ ಕ್ಯಾಮರಾ ಜತೆಗೆ ಬ್ರಿಗೇಡ್ ಹಾಗೂ ಎಂಜಿ ರೋಡ್‌ನಲ್ಲಿ 800ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಇದರ ಜತೆಗೆ ಈಗಾಗಲೇ ಬ್ರಿಗೇಡ್ ರೋಡ್ನಲ್ಲಿ ಡಾಗ್ ಸ್ವ್ಕಾಡ್ ಮತ್ತು ಬಾಂಬ್ ಸ್ಕ್ವಾಡ್ ನಿಂದ ಪರಿಶೀಲನೆ ಮಾಡಲಾಗುತ್ತಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.