ವಿಶ್ವಾದ್ಯಂತ 12 ಸಾವಿರ ಸ್ಕ್ರೀನ್‌ಗಳಲ್ಲಿ KGF 2 ರಿಲೀಸ್: ಜೋರಾಗಿದೆ ಸಿನಿಮಾ ಹವಾ
ನಟ ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ (Prashant Neel( ಜೋಡಿಯ ಬಹುನಿರೀಕ್ಷೆಯ ‘ಕೆಜಿಎಫ್ 2’ (KGF 2) ಚಿತ್ರ ವಿಶ್ವಾದ್ಯಂತ 12 ಸಾವಿರ ಸ್ಕ್ರೀನ್‌ಗಳಲ್ಲಿ ಇಂದು ರಿಲೀಸ್ ಆಗಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ‘ಕೆಜಿಎಫ್ 2’ ಚಿತ್ರವನ್ನು ಅಭಿಮಾನಿಗಳು, ಪ್ರೇಕ್ಷಕರು ಭರ್ಜರಿಯಾಗಿ ಸ್ವಾಗತಿಸಿದ್ದಾರೆ.
ಬೆಂಗಳೂರು (ಏ. 14): ನಟ ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ (Prashant Neel( ಜೋಡಿಯ ಬಹುನಿರೀಕ್ಷೆಯ ‘ಕೆಜಿಎಫ್ 2’ (KGF 2) ಚಿತ್ರ ವಿಶ್ವಾದ್ಯಂತ 12 ಸಾವಿರ ಸ್ಕ್ರೀನ್‌ಗಳಲ್ಲಿ ಇಂದು ರಿಲೀಸ್ ಆಗಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ‘ಕೆಜಿಎಫ್ 2’ ಚಿತ್ರವನ್ನು ಅಭಿಮಾನಿಗಳು, ಪ್ರೇಕ್ಷಕರು ಭರ್ಜರಿಯಾಗಿ ಸ್ವಾಗತಿಸಿದ್ದಾರೆ.
ದಯವಿಟ್ಟು ಪೈರಸಿ ಮಾಡಬೇಡಿ: ಟೀಂ ಕೆಜಿಎಫ್ 2
ಬೆಂಗಳೂರಿನ ಊರ್ವಶಿ, ಮೈಸೂರಿನ ಡಿಸಿಆರ್ ಸೇರಿದಂತೆ ರಾಜ್ಯದ ಹಲವು ಥಿಯೇಟರ್‌ನಲ್ಲಿ (Theatre) ಕೆಜಿಎಫ್-2 (KGF 2) ಸಿನಿಮಾ ಬುಧವಾರ ರಾತ್ರಿ 12 ಗಂಟೆಗೇ ಮೊದಲ ಪ್ರದರ್ಶನ ಕಂಡಿದೆ. ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದ್ದು, ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲೂ ರಾಕಿಂಗ್ ಸ್ಟಾರ್ ಯಶ್ ಅವರ ಬೃಹತ್ ಕಟೌಟ್‌ಗಳು ರಾರಾಜಿಸುತ್ತಿವೆ. ಡೊಳ್ಳು ಕುಣಿತ, ಹೂವಿನ ಹಾರಗಳ ಅಲಂಕಾರದಿಂದ ಚಿತ್ರಮಂದಿರಗಳ ಮುಂದೆ ಹಬ್ಬದ ವಾತಾವರಣ ನಿರ್ಮಾಣ ಆಗಿದೆ.