ನಾನು, ಸೌಜನ್ಯ ಫ್ರೆಂಡ್ಸ್, ಲೀವಿಂಗ್ ಟುಗೆದರ್ ಇರ್ಲಿಲ್ಲ: ನಟ ವಿವೇಕ್
ನಾನು, ಸೌಜನ್ಯ ಲೀವಿಂಗ್ ಟುಗೆದರ್‌ನಲ್ಲಿರಲಿಲ್ಲ. ನಾವು ಕಳೆದೊಂದು ವರ್ಷದಿಂದ ಸ್ನೇಹಿತರು. ಆಗಾಗ ಭೇಟಿಯಾಗ್ತಿದ್ವಿ. ಆಕೆಯ ಸಾವಿನಿಂದ ನನಗೆ ಆಘಾತವಾಗಿದೆ: ನಟ ವಿವೇಕ್
ಬೆಂಗಳೂರು (ಅ. 01): ಯುವ ನಟಿ, ಕೊಡಗಿನ ಸೌಜನ್ಯ ಅಲಿಯಾಸ್ ಸವಿ ಮಾದಪ್ಪ (25) ಡೆತ್‌ನೋಟ್ ಬರೆದಿಟ್ಟು ಬೆಂಗಳೂರಿನ ನಿವಾಸದಲ್ಲಿಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಟ ವಿವೇಕ್, ಪಿಎ ಮಹೇಶ್ ಮೇಲೆ ಅನುಮಾನ, ಸೌಜನ್ಯ ಫ್ಲಾಟ್‌ಗೆ ಪೊಲೀಸರ ಭೇಟಿ
ಸೌಜನ್ಯ ಬಗ್ಗೆ ತಂದೆ ಮಾದಪ್ಪ ಅನುಮಾನ ವ್ಯಕ್ತಪಡಿಸಿದ್ದಾರೆ. ನನ್ನ ಮಗಳಿಗೆ ನಟ ವಿವೇಕ್ ಮದುವೆಯಾಗು ಎಂದು ಕಿರುಕುಳ ನೀಡುತ್ತಿದ್ದ. ಅದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿವೇಕ್, ನಾನು, ಸೌಜನ್ಯ ಲೀವಿಂಗ್ ಟುಗೆದರ್‌ನಲ್ಲಿರಲಿಲ್ಲ. ನಾವು ಕಳೆದೊಂದು ವರ್ಷದಿಂದ ಸ್ನೇಹಿತರು. ಆಗಾಗ ಭೇಟಿಯಾಗ್ತಿದ್ವಿ. ಆಕೆಯ ಸಾವಿನಿಂದ ನನಗೆ ಆಘಾತವಾಗಿದೆ' ಎಂದಿದ್ದಾರೆ.