Asianet Suvarna News Asianet Suvarna News

ಡಿಸ್ಟ್ರಿಬ್ಯೂಟರ್ 4 ಕೋಟಿ ಕೈ ಎತ್ತಿದಾನೆ, ಕೋಟಿಗೊಬ್ಬ-3 ರಿಲೀಸ್‌ಗೆ ವಿಘ್ನ

Oct 14, 2021, 1:26 PM IST

ಬೆಂಗಳೂರು (ಅ. 14):ನಟ ಸುದೀಪ್‌ ಅಭಿನಯದ ‘ಕೋಟಿಗೊಬ್ಬ 3’ ಹಾಗೂ ದುನಿಯಾ ವಿಜಯ್‌ ನಟಿಸಿ ನಿರ್ದೇಸಿಸಿರುವ ‘ಸಲಗ’ ಚಿತ್ರಗಳು ದಸರಾ ಹಬ್ಬದ ಅಂಗವಾಗಿ ರಾಜ್ಯಾದ್ಯಾಂತ ತೆರೆ ಕಾಣಲು ಸಜ್ಜಾಗಿತ್ತು. ಕಾರಣಾಂತರದಿಂದ ಕೋಟಿಗೊಬ್ಬ-3 ರಿಲೀಸ್  ಆಗುತ್ತಿಲ್ಲ.  ಇಬ್ಬರು ಸ್ಟಾರ್‌ ನಟರ ಎರಡು ಬಿಗ್‌ ಬಜೆಟ್‌ನ ದೊಡ್ಡ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿತ್ತು

ಕೋಟಿಗೊಬ್ಬ -3: ಪ್ರಸನ್ನ ಚಿತ್ರಮಂದಿರದಲ್ಲಿ ಫಸ್ಟ್ ಶೋ ರದ್ದು!

'ಕೋಟಿಗೊಬ್ಬ- 3 75 ಕೋಟಿ ವ್ಯವಹಾರದ ಸಿನಿಮಾ. ಡಿಸ್ಟ್ರಿಬ್ಯೂಟರ್ 4 ಕೋಟಿ ರೂಪಾಯಿ ಕೈ ಎತ್ತಿದ್ದಾನೆ. ನನ್ನದಲ್ಲ, ಯಾರೋ ಮಾಡಿದ ತಪ್ಪಿಗೆ ತೊಂದರೆಯಾಗುತ್ತಿದೆ' ಎಂದು ಸುದೀಪ್ ಅಭಿಮಾನಿಗಳಲ್ಲಿ ನಿರ್ಮಾಪಕ ಸೂರಪ್ಪ ಬಾಬು ಮನವಿ ಮಾಡಿದ್ದಾರೆ.