ಚೇತನ್ ಹೇಳಿಕೆಗೆ ಶುರುವಾಯ್ತು ಕಾಂತಾರ 'ಧರ್ಮ' ಕಿಚ್ಚು

ನಟ ಚೇತನ್ ಇನ್ನೊಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದು, ಕಾಂತಾರ ಸಿನಿಮಾ ಬಗ್ಗೆ ಮಾತಾಡೋಕೆ ಹೋಗಿ ಹಿಂದೂ ಧರ್ಮವನ್ನು ಎಳೆದು ತಂದಿದ್ದಾರೆ. 
 

Share this Video
  • FB
  • Linkdin
  • Whatsapp

ಕಾಂತಾರ ಸಿನಿಮಾದಲ್ಲಿ ತೋರಿಸಿರೋ ಭೂತಕೋಲ ಹಿಂದೂಗಳದ್ದಲ್ಲ, ಅಲ್ಲಿ ಬರುವ ಪಂಜುರ್ಲಿ, ಗುಳಿಗ ದೈವಕ್ಕೂ ಹಿಂದೂ ಧರ್ಮಕ್ಕೂ ಸಂಬಂಧವಿಲ್ಲ ಎನ್ನುವ ಮೂಲಕ ಚೇತನ್ ವಿವಾದದ ಕಿಚ್ಚು ಹೊತ್ತಿಸಿದ್ದಾರೆ. ಇನ್ನೊಂದು ಕಡೆಯಲ್ಲಿ ಅವರ ಮಾತಿಗೆ ವಿರೋಧಗಳು ವ್ಯಕ್ತವಾಗುತ್ತಿವೆ. ಚೇತನ್ ಮಾತಿಗೆ ದೈವವನ್ನು ನಂಬುವವರು ಹಾಗೂ ಸಿನಿಮಾದಲ್ಲಿ ನಟನೆ ಮಾಡಿದವರು ಖಡಕ್ ಉತ್ತರ ನೀಡುತ್ತಿದ್ದಾರೆ. ಭೂತಕೋಲವನ್ನು ತೀರಾ ಹತ್ತಿರದಿಂದ ನೋಡಿರುವ ಹಾಗೂ ಅನುಸರಿಸುವ ಜನರು ಚೇತನ್ ಮಾತಿಗೆ ಕೆಂಡವಾಗಿದ್ದಾರೆ. 

ಕಾಂತಾರ ಚಿತ್ರ ವಿವಾದ: ನಟ ಚೇತನ್‌ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಕಿಡಿ

Related Video