ರಮ್ಯಾ ವಿರುದ್ಧ ಅಶ್ಲೀಲ ಕಾಮೆಂಟ್: ದರ್ಶನ್ ಫ್ಯಾನ್ಸ್‌ಗೆ ಸಂಕಷ್ಟ

ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದಿದ್ದಕ್ಕೆ ರಮ್ಯಾ ಅವರನ್ನು ಅಶ್ಲೀಲವಾಗಿ ನಿಂದಿಸಿದ್ದ ದರ್ಶನ್ ಅಭಿಮಾನಿಗಳ ವಿರುದ್ಧ ರಮ್ಯಾ ಪೊಲೀಸ್ ದೂರು ನೀಡಿದ್ದಾರೆ. ಸೈಬರ್ ಕ್ರೈಂ ವಿಭಾಗಕ್ಕೆ ದೂರು ವರ್ಗಾವಣೆಯಾಗಿದ್ದು, ಕಿಡಿಗೇಡಿಗಳಿಗೆ ಶೀಘ್ರದಲ್ಲೇ ತಕ್ಕ ಶಾಸ್ತಿಯಾಗಲಿದೆ.

Share this Video
  • FB
  • Linkdin
  • Whatsapp

ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಅಂದಿದ್ದಕ್ಕೆ ರಮ್ಯಾ ಮೇಲೆ ಮುಗಿಬಿದ್ದು, ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದ ಫ್ಯಾನ್ಸ್​ಗೀಗ ನಡುಕ ಶುರುವಾಗಿದೆ. ಇವರು ಕಳಿಸಿದ ಕೆಟ್ಟ ಮೆಸೇಜ್ ಗಳನ್ನ ನೋಡಿ ಕಣ್ಣೀರು ಹಾಕ್ತಾ ಕೂರವಂಥಾ ಹೆಣ್ಣಲ್ಲ ರಮ್ಯಾ. ತನಗೆ ಅಶ್ಲೀಲ ಮೆಸೇಜ್ ಮಾಡಿ, ನಿಂದಿಸಿದ್ದ ದರ್ಶನ್ ಅಭಿಮಾನಿಗಳ ಅಕೌಂಟ್​ ಪಟ್ಟಿ ಮಾಡಿ ಸೀದಾ ಕಮೀಷನರ್ ಕಚೇರಿಗೆ ಬಂದು ದೂರು ಕೊಟ್ಟಿದ್ದಾರೆ.

ರಮ್ಯಾ ದೂರಿನಲ್ಲಿ ತಮಗೆ ಅಶ್ಲೀಲ ಮಸೇಜ್ ಕಳಿಹಿದವರ ಅಕೌಂಟ್​ಗಳನ್ನ ಪಟ್ಟಿ ಮಾಡಿ ಕೊಟ್ಟಿದ್ದಾರೆ. ಈಗಾಗ್ಲೇ ಇದನ್ನ ಸೈಬರ್​ ಕ್ರೈಂ ಡಿಪಾರ್ಟ್​​ಮೆಂಟ್​ಗೆ ವರ್ಗಾಯಿಸಲಾಗಿದ್ದು ಸದ್ಯದಲ್ಲೇ ಕಿಡಿಗೇಡಿ ಫ್ಯಾನ್ಸ್​ಗೆ ಬಿಸಿ ಕಜ್ಜಾಯ ಕಾದಿದೆ. ಇದು ತನಗೆ ಮೆಸೇಜ್ ಮಾಡಿದವರಿಗೆ ಮಾತ್ರ ಅಲ್ಲ ಹೆಣ್ಣುಮಕ್ಕಳನ್ನ ನಿಂದಿಸುವ ಎಲ್ಲರಿಗೂ ಪಾಠ ಅಗಬೇಕು ಅನ್ನೋದು ರಮ್ಯಾ ನಿಲುವು.

ದರ್ಶನ್ ತಮ್ಮ ಅಭಿಮಾನಿಗಳು ಈ ರೀತಿ ಪುಂಡಾಟ ಆಡೋದನ್ನ ನೋಡಿಯೂ ನಿರ್ಲಕ್ಷ ವಹಿಸಿದ್ದೇ ತಪ್ಪು. ಅವರು ಅವರ ಅಭಿಮಾನಿಗಳಿಗೆ ತಿದ್ದಿ ಬುದ್ದಿ ಹೇಳಿದ್ರೆ ಇಂಥದ್ದೆಲ್ಲಾ ನಡೀತಾನೇ ಇರಲಿಲ್ಲ ಅಂತಾರೆ ರಮ್ಯಾ. ದರ್ಶನ್ ಜೊತೆ ರಮ್ಯಾ ನಟಿಸಿದ್ದು ಒಂದೇ ಒಂದು ಸಿನಿಮಾದಲ್ಲಿ. ದತ್ತ ಸಿನಿಮಾ ಮಾಡೋವಾಗ ದರ್ಶನ್ ಮತ್ತು ರಮ್ಯಾ ನಡುವೆ ಒಳ್ಳೆ ಒಡನಾಟ ಇತ್ತು. ಆದ್ರೆ ದರ್ಶನ್ ಪತ್ನಿ ಮೇಲೆ ಹಲ್ಲೆ ಮಾಡಿ ಮೊದಲ ಬಾರಿ ಅರೆಸ್ಟ್ ಆದಾಗಲೇ ರಮ್ಯಾ ದರ್ಶನ್​ ಜೊತೆಗಿನ ನಂಟನ್ನ ಕಡಿದುಕೊಂಡ್ರು. ಸದ್ಯ ತನ್ನ ಬಳಿ ದರ್ಶನ್ ನಂಬರ್ ಕೂಡ ಇಲ್ಲ ಅಂದಿದ್ದಾರೆ ರಮ್ಯಾ.

ರಮ್ಯಾಗೆ ಈ ವಿಚಾರದಲ್ಲಿ ಸ್ಯಾಂಡಲ್​ವುಡ್​ನ ಹಲವು ತಾರೆಯರು ಬೆಂಬಲಕ್ಕೆ ನಿಂತಿದ್ದಾರೆ. ಮಹಿಳಾ ಆಯೋಗ ಕೂಡ ಈ ಬಗ್ಗೆ ಪೊಲೀಸರಿಗೆ ಪತ್ರ ಬರೆದು ಅಶ್ಲೀಲವಾಗಿ ನಿಂದಿಸಿದ್ದ ಕೆಡಿಗಳ ವಿರುದ್ದ ಕ್ರಮಗೊಳ್ಳವುಂತೆ ಒತ್ತಾಯಿಸಿದೆ. ಫೈರ್ ಸಂಘಟನೆ ಕೂಡ ರಮ್ಯಾ ಬೆಂಬಲಕ್ಕೆ ನಿಂತಿದ್ದು ತ್ವರಿತ ಕ್ರಮಕೈಗೊಳ್ಳಿ ಅಂತ ಸರ್ಕಾರಕ್ಕೆ ಒತ್ತಾಯಿಸಿದೆ. ಒಟ್ಟಾರೆ ಇಷ್ಟು ದಿನ ಕಂಡ ಕಂಡ ಹೆಣ್ಣುಮಕ್ಕಳಿಗೆ ಕೆಟ್ಟದಾಗಿ ನಿಂದಿಸಿ ಬಚಾಬ್ ಆಗ್ತಿದ್ದ ಕಾಮೆಂಟ್ ಕೀಚಕರಿಗೆ ಈಗ ನಡುಕ ಶುರುವಾಗಿದೆ. ಆ ಕೀಚಕರ ಮುಖವಾಡ ಕಳಚುವ ಸಮಯ ಬಂದಿದೆ. 

Related Video