Video: ನಾನು ಇಲ್ಲಿಂದ ಹೋಗಲ್ಲ ಬಿಟ್ಟುಬಿಡಿ..! ಚೈನ್ ಕಿತ್ತುಕೊಂಡು ಓಡಿದ ಲಕ್ಷ್ಮೀ ಆನೆ!

ನಾನು ಇಲ್ಲಿಂದ ಹೋಗಲ್ಲ ಬಿಟ್ಟುಬಿಡಿ..!| 1 ಗಂಟೆಯಿಂದ ಲಾರಿ ಹತ್ತದೆ ಸತಾಯಿಸುತ್ತಿರುವ ಲಕ್ಷ್ಮಿ ಆನೆ| ಲಕ್ಷ್ಮಿ ಆನೆಗೆ ದಂತಗಳಿಂದ ತಿವಿದು ಲಟರಿ ಹತ್ತಿಸಲು ಮುಂದಾದ ಗೋಪಿ ಆನೆ| ಗೋಪಿ ಏಟು ತಾಳದೆ ಅರಮನೆ ಆವರಣದಲ್ಲೆಲ್ಲಾ ಓಡಾಡುತ್ತಿರುವ ಲಕ್ಷ್ಮಿ ಆನೆ| ಲಾರಿಗೆ ಕಟ್ಟಲಾಗಿದ್ದ ಚೈನ್ ಕಿತ್ತುಕೊಂಡ ಓಡಿದ ಲಕ್ಷ್ಮಿ ಆನೆ.

Share this Video
  • FB
  • Linkdin
  • Whatsapp

ಮೈಸೂರು[ಅ.10]: ನಾಡಹಬ್ಬ ಮೈಸೂರು ದಸರಾಗೆ ತೆರೆ ಬಿದ್ದಿದೆ. ವಿಶ್ವ ವಿಖ್ಯಾತ ಮೈಸೂರಿನ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜ ಪಡೆಯೂ ಕಾಡಿನತ್ತ ಮರಳಬೇಕಿದೆ. ಮೈಸೂರು ಅರಮನೆ ಆವರಣದಲ್ಲಿ ಒಂದು ದಿನ ರಿಲ್ಯಾಕ್ಸ್ ಮಾಡಿದ್ದ ಆನೆಗಳನ್ನು ಕರೆದೊಯ್ಯಲು ಲಾರಿಗಳೂ ಬಂದಿವೆ. ಆದರೆ ಲಕ್ಷ್ಂಇ ಆನೆಗೆ ಮಾತ್ರ ಮೈಸೂರು ಬಿಟ್ಟು ಹೋಗಲು ಮನಸ್ಸಿಲ್ಲ.

ಹೌದು ಲಕ್ಷ್ಮೀ ಆನೆ 1 ಗಂಟೆಯಿಂದ ಲಾರಿ ಹತ್ತದೆ ಸತಾಯಿಸುತ್ತಿದೆ. ಗೋಪಿ ಆನೆ ತನ್ನ ದಂತಗಳಿಂದ ತಿವಿದು ಲಾರಿ ಹತ್ತಿಸಲು ಯತ್ನಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬದಲಾಗಿ ಗೋಪಿ ಏಟು ತಾಳದೆ, ಲಾರಿಗೆ ಕಟ್ಟಲಾಗಿದ್ದ ಚೈನ್ ಕಿತ್ತು ಹಾಕಿದ ಲಕ್ಷ್ಮೀ ಆನೆ ಅರಮನೆ ಆವರಣದಲ್ಲೆಲ್ಲಾ ಓಡಾಡಲಾರಂಭಿಸಿದೆ. 

ಲಕ್ಷ್ಮೀ ಆನೆ ಲಾರಿ ಹತ್ತಿಸಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಹೀಗಿರುವಾಗ ಈ ದೃಶ್ಯ ನೋಡಲು ಜನರೂ ನೆರೆದಿದ್ದು, ವರನ್ನು ನಿಯಂತ್ರಿಸಲು ಪೊಲೀಸರು ಕೂಡಾ ಇಲ್ಲದಂತಾಗಿದೆ. 

Related Video