ಅತ್ಯಂತ ಕಡಿಮೆ ದರದ ಟಚ್ ಸ್ಕ್ರೀನ್ ಫೋನ್ ಬಿಡುಗಡೆ ಮಾಡಿದ ಜಿಯೋ!

*ಅತಿ ಕಡಿಮೆ ಬೆಲೆಯ ಜಿಯೋಪೋನ್ ನೆಕ್ಸ್ಟ್‌ ಟಚ್‌ ಸ್ಕ್ರೀನ್ ಮೊಬೈಲ್‌ ಮಾರುಕಟ್ಟಗೆ
*13 ಮೆಗಾಪಿಕ್ಸಲ್‌ ರೇರ್‌ ಕ್ಯಾಮೆರಾ, 8 ಎಂಪಿ ಫ್ರಂಟ್‌ ಕ್ಯಾಮೆರಾ 
*ಗ್ರಾಹಕರಿಗೆ 18-24 ತಿಂಗಳಲ್ಲಿ EMI ಪಾವತಿಸುವ ಅವಕಾಶ 

First Published Nov 3, 2021, 10:29 AM IST | Last Updated Nov 3, 2021, 10:29 AM IST

ನವದೆಹಲಿ (ನ.3):ರಿಲಯನ್ಸ್‌ ಜಿಯೋ (Reliance Jio)  ಭಾರತೀಯ ಸೆಲ್ಯೂರಾರ್‌ (Cellular) ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದೆ. ಅತಿ ಕಡಿಮೆ ಬೆಲೆಯ ಜಿಯೋಪೋನ್ ನೆಕ್ಸ್ಟ್‌ (JioPhone Next) ಟಚ್‌ ಸ್ಕ್ರೀನ್ ಮೊಬೈಲ್‌ ಮಾರುಕಟ್ಟಗೆ ಬಿಡುಗಡೆ ಮಾಡಿದೆ. ದೇಶಾದ್ಯಂತ ಇರುವ ಎಲ್ಲಾ ಜಿಯೋ (Jio) ಡಿಜಿಟಲ್‌ ರಿಟೇಲ್‌ (Digital shops) ಮಳಿಗೆಗಳಲ್ಲಿ ಈ ಫೋನ್‌ ಲಭ್ಯವಿರಲಿದೆ.‌ ಈ ವಾರದಲ್ಲೇ ಈ ಮೊಬೈಲ್‌ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಈ ಮೊಬೈಲ್‌ನ ದರವು 6499 ರೂ. ಆಗಿದ್ದು, ಗ್ರಾಹಕರು (customers) ಇಷ್ಟು ಹಣವನ್ನು ಒಮ್ಮೆಲೇ ಪಾವತಿಸಿಯೂ ಖರೀದಿಸಬಹುದಾಗಿದೆ. ಅಥವಾ ಮೊದಲಿಗೆ 1999 ರೂ. ಪಾವತಿಸಿ ಉಳಿದ ಹಣವನ್ನು (Money) 18-24 ತಿಂಗಳಲ್ಲಿ ಕಂತಿನಲ್ಲಿ ಪಾವತಿಸುವ ಅವಕಾಶವೂ ಗ್ರಾಹಕರಿಗೆ ಇದೆ. ಜತೆಗೆ  501 ರೂ. ಪ್ರೊಸೆಸಿಂಗ ಶುಲ್ಕವನ್ನು ಪಾವತಿಸಬೇಕಿದೆ

ಭಾರತದಲ್ಲಿ ದುಪ್ಪಟ್ಟುಗೊಂಡ ಆಪಲ್ ಬಿಸಿನೆಸ್, ಹಬ್ಬದ ಸೀಸನ್ ಕಾರಣ?

ಈ ಮೊಬೈಲ್‌ 13 ಮೆಗಾಪಿಕ್ಸಲ್‌ ರೇರ್‌ ಕ್ಯಾಮೆರಾ (Camera), 8 ಎಂಪಿ ಫ್ರಂಟ್‌ ಕ್ಯಾಮೆರಾ, 2 ಜಿಬಿ  Ram 32 ಜಿಬಿ ಆಂತರಿಕ ಸ್ಟೋರೇಜ್‌, 2 ಸಿಮ್‌ ಸ್ಲಾಟ್‌ಗಳನ್ನು (Sim slot) ಹೊಂದಿದೆ.  JioPhone ನೆಕ್ಸ್ಟ್, 5W ಚಾರ್ಜಿಂಗ್ ಅಡಾಪ್ಟರ್ ಮತ್ತು ಮೈಕ್ರೋ ಯುಎಸ್‌ಬಿ ಚಾರ್ಜಿಂಗ್ ಕೇಬಲ್ ಜೊತೆಗೆ ವಾರಂಟಿ ಕಾರ್ಡ್ ಮತ್ತು ಬಳಕೆದಾರ ಮಾರ್ಗದರ್ಶಿಯನ್ನು ನೀಡುತ್ತಿದೆ. ಬಾಕ್ಸ್ ಒಳಗೆ ಯಾವುದೇ ಫೋನ್‌ ಕವರ್‌ ಅಥವಾ ಇಯರ್‌ಫೋನ್‌ಗಳಿಲ್ಲ. ಬಾಕ್ಸ್‌ ನಲ್ಲಿ ಬ್ಯಾಟರಿ ಕೂಡ ಪ್ರತ್ಯೇಕವಾಗಿ ನೀಡಲಾಗಿದೆ ಹಾಗಾಗಿ ಗ್ರಾಹಕರೇ ಬ್ಯಾಟರಿ ಅಳವಡಿಸಬೇಕಾಗುತ್ತದೆ.

ಮೊಬೈಲ್ ಕಳೆದು ಹೋಯ್ತಾ? Google Pay, Paytm and PhonePe ಬ್ಲಾಕ್ ಮಾಡೋದು ಹೇಗೆ?

ಅಲ್ಲದೆ ಗ್ರಾಹಕರು 701-827-0182 ಸಂಖ್ಯೆಗೆ ಹಾಯ್‌ ಎಂದು ವಾಟ್ಸಾಪ್‌ ಮಾಡುವ ಮುಖಾಂತರ ಈ ಮೊಬೈಲ್‌ ಖರೀದಿಗೆ ತಮ್ಮ ಹೆಸರು ನೋಂದಾಯಿಸಬಹುದು. ಆದಾಗ್ಯೂ, ಗ್ರಾಹಕರು ಈ ಮೊಬೈಲ್‌ ಪಡೆಯಲು ಹತ್ತಿರದ ಜಿಯೋ ಡಿಜಿಟಲ್‌ ರಿಟೇಲ್‌ ಮಳಿಗೆಗೆ ಹೋಗಲೇಬೇಕು.