Asianet Suvarna News Asianet Suvarna News

ಭಾರತದಲ್ಲಿ ದುಪ್ಪಟ್ಟುಗೊಂಡ ಆಪಲ್ ಬಿಸಿನೆಸ್, ಹಬ್ಬದ ಸೀಸನ್ ಕಾರಣ?

ಪ್ರಮುಖ ಸ್ಮಾರ್ಟ್‌ಫೋನ್ ಉತ್ಪಾದಕ ಕಂಪನಿಗಳಲ್ಲಿ ಒಂದಾಗಿರುವ ಆಪಲ್ (Apple), ತನ್ನ ಐಫೋನ್ (iPhone) ಸ್ಮಾರ್ಟ್‌ಫೋನ್‌ಗಳ ಮೂಲಕ ಹೆಚ್ಚು ಪ್ರಸಿದ್ಧಿಯಾಗಿದೆ. ಕಂಪನಿಯ ಒಟ್ಟಾರೆ ವ್ಯವಹಾರವು ಹೆಚ್ಚಾಗಿದೆ. ಅದೇ ರೀತಿ,  ಭಾರತೀಯ ಮಾರುಕಟ್ಟೆಯಲ್ಲಿ ಆಪಲ್‌ನ ಬಿಸಿನೆಸ್ ದುಪ್ಪಟ್ಟು ಹೆಚ್ಚಾಗಿದೆ.

Apple business doubled in Indian market during festive season
Author
Bengaluru, First Published Oct 30, 2021, 4:30 PM IST

ತನ್ನ ಅತ್ಯಾಧುನಿಕ ಐಫೋನ್ (iPhone) ಸ್ಮಾರ್ಟ್‌ಫೋನ್‌ಗಳ ಮೂಲಕವೇ ಜಗತ್ತಿನಾದ್ಯಂತ ಜನಪ್ರಿಯವಾಗಿರುವ ಆಪಲ್‌ (Apple)ಗೆ ಭಾರತದಲ್ಲೂ ಒಳ್ಳೆಯ ಹೆಸರಿದೆ. ಪ್ರೀಮಿಯಂ ಫೋನುಗಳ ಮೂಲಕ ಆಪಲ್‌ನ ಭಾರತೀಯ ಮಾರುಕಟ್ಟೆ ವಿಸ್ತಾರಗೊಂಡಿದೆ. ಈ ಹಿನ್ನಲೆಯಲ್ಲೇ ಆಪಲ್‌ ಬಿಸಿನೆಸ್ ಭಾರತದಲ್ಲೂ ಹೆಚ್ಚಾಗುತ್ತಿದೆ.

ಸೆಪ್ಟೆಂಬರ್‌ಗೆ ಮುಕ್ತಾಯವಾದ ತ್ರೈಮಾಸಿಕ ಲೆಕ್ಕಾಚಾರ ಪ್ರಕಾರ, ಆಪಲ್ 83.4 ಬಿಲಿಯನ್ ಡಾಲರ್ ಆದಾಯವನ್ನು ದಾಖಲಿಸಿದೆ. ಆ ಮೂಲಕ ವರ್ಷದಿಂದ ವರ್ಷಕ್ಕೆ ಆಪಲ್ ಆದಾಯದಲ್ಲಿ ಶೇ.29ರಷ್ಟು ಹೆಚ್ಚು ಆದಂತಾಗಿದೆ. ಅದೇ ರೀತಿ, ಭಾರತೀಯ ಮಾರುಕಟ್ಟೆಗೆ ಸಂಬಂಧಿಸದಂತೆ ಹೇಳುವುದಾದರೆ ಆಪಲ್ (Apple) ತನ್ನ ಆದಾಯವನ್ನು ದುಪ್ಪಟ್ಟುಗೊಳಿಸಿದೆ ಎಂದು ಆಪಲ್ ಸಿಇಒ (CEO) ಟಿಮ್ ಕುಕ್ (Tim Cook) ಖಚಿತಪಡಿಸಿದ್ದಾರೆ. 

ನ.1ರಿಂದ ಈ ಫೋನಲ್ಲಿ What's App ಇರೋಲ್ಲ, ಲಿಸ್ಟಲ್ಲಿ ನೀವು ಬಳಸುತ್ತಿರುವ ಫೋನ್ ಇದೆಯಾ?
 
ಭಾರತದಲ್ಲಿ ಈಗ ಹಬ್ಬದ ಸೀಸನ್ ನಡೆಯುತ್ತಿದೆ. ಆನ್‌ಲೈನ್ ಮಾರಾಟ  ಭರ್ಜರಿಯಾಗುತ್ತಿದೆ. ಜೊತಗೆ, ಫೋನುಗಳ ಮಾರಾಟಕ್ಕೆ ನೀಡಲಾಗುತ್ತಿರುವ ವಿಶೇಷ ರಿಯಾಯ್ತಿಗಳಿಂದಾಗಿ ಸಹಜವಾಗಿಯೇ ಆಪಲ್‌ನ ಒಟ್ಟು ಆದಾಯದಲ್ಲಿ  ದುಪ್ಪಟ್ಟ ಆಗಲು ಕಾರಣ ಎಂದು ಹೇಳಲಾಗುತ್ತಿದೆ. 

ಈ ಹಬ್ಬದ ಸೀಸನ್‌ಲ್ಲಿ ಆಪಲ್ ಕಂಪನಿಯ ಐಫೋನ್ 12 (iPhone 12) ಸ್ಮಾರ್ಟ್‌ಫೋನ್ 50 ಸಾವಿರ ರೂಪಾಯಿಗೆ ಮಾರಟವಾಗುತ್ತಿದೆ. ಆಪಲ್‌ನಿಂದ ಐಫೋನ್ 12 ಖರೀದಿ ವೇಳೆ ಗ್ರಾಹಕರು ಉಚಿತವಾಗಿ ಏರ್‌ಪಾಡ್ಸ್ ಪಡೆಯಬಹುದು. ಹಾಗಾಗಿ  ಭಾರತೀಯ ಮಾರುಕಟ್ಟೆಯಲ್ಲಿ ಐಫೋನ್‌ಗಳು ಹೆಚ್ಚಿನ ಮಾರಾಟದಲ್ಲಿ ಐಫೋನ್ 12 ಹೆಚ್ಚಿನ ಕಾಣಿಕೆಯನ್ನು ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Apple business doubled in Indian market during festive season

ಆಪಲ್ ಪ್ರತಿ ಭೌಗೋಳಿಕ ವಿಭಾಗದಲ್ಲಿ ತ್ರೈಮಾಸಿಕ ದಾಖಲೆಗಳನ್ನು ಬೋರ್ಡ್‌ನಾದ್ಯಂತ ಬಲವಾದ ಎರಡಂಕಿಯ ಬೆಳವಣಿಗೆಯೊಂದಿಗೆ ಸ್ಥಾಪಿಸಿದೆ. 2021 ರ ಆರ್ಥಿಕ ವರ್ಷದಲ್ಲಿ, ನಾವು ಉದಯೋನ್ಮುಖ ಮಾರುಕಟ್ಟೆಗಳಿಂದ ನಮ್ಮ ಆದಾಯದ ಸುಮಾರು ಮೂರನೇ ಒಂದು ಭಾಗವನ್ನು ಗಳಿಸಿದ್ದೇವೆ ಎಂದು ಆಪಲ್ ಸಿಇಒ ಟಿಮ್ ಕುಕ್ (Tim Cook) ಭಾರತದ ವ್ಯವಹಾರದ  ಬಗ್ಗೆಯೇ ಹೇಳಿದ್ದಾರೆ. 

ದೀಪಾವಳಿಗೆ Jiophone Next ಲಾಂಚ್, ಊಹೆಗೆ ನಿಲುಕದ ಬೆಲೆ ಸ್ಮಾರ್ಟ್‌ಫೋನ್?

ಪೂರೈಕೆ ಸರಪಳಿಯ ನಿರ್ಬಂಧಗಳ ಹೊರತಾಗಿಯೂ, ಆಪಲ್ ಇದು ದಾಖಲೆಯ ಡಿಸೆಂಬರ್ ರಜಾ ತ್ರೈಮಾಸಿಕವನ್ನು ಹೊಂದಿಸುತ್ತದೆ ಎಂದು ನಂಬುತ್ತದೆ. ಕಂಪನಿಯ ಸೇವೆಗಳು 18.27 ಶತಕೋಟಿ ಡಾಲರ್ ಸಾರ್ವಕಾಲಿಕ ತ್ರೈಮಾಸಿಕ ಆದಾಯದ ದಾಖಲೆಯನ್ನು ಸಾಧಿಸಿದೆ. ಒಂದು ವರ್ಷದ ಹಿಂದಕ್ಕೆ ಹೋಲಿಸಿದರೆ, ಈ ಪ್ರಮಾಣ ಶೇ.25ರಷ್ಟು ಹೆಚ್ಚಾಗಿದೆ. ಆಪಲ್ ( Apple) ಸೇವೆಗಳಲ್ಲಿ ಆಪಲ್ ಮ್ಯೂಸಿಕ್ (Apple Music), ಆಪಲ್ ಸ್ಟೋರ್ ( App Store), ಆಪಲ್ ಅರ್ಕಾಡ್ (Apple Arcade),  ಆಪಲ್ ಟಿವಿ ಪ್ಲಸ್ (Apple TV+), ಆಪಲ್ ಕೇರ್ ಪ್ಲಸ್ ( AppleCare+), ಐಕ್ಲೌಡ್ ( iCloud) ಸೇರಿದಂತೆ ಇನ್ನಿತ ಸೇವೆಗಳನ್ನು ಗುರತಿಸಬಹುದಾಗಿದೆ.

ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರುವ ಹೊಸ ಐಫೋನುಗಳು
ಆಪಲ್ ಕಂಪನಿಯು ಐಫೋನ್ ಸೀರೀಸ್ ಸ್ಮಾರ್ಟ್‌ಫೋನ್, ಹೊಸ ಆಪಲ್ ವಾಚ್, ಹೊಸ ಐಪಾಡ್‌ಗಳನ್ನು ಕ್ಯಾಲಿಫೋರ್ನಿಯಾದಲ್ಲಿ ಇತ್ತೀಚೆಗೆ ನಡೆದ ವರ್ಚುಲ್ ಕಾರ್ಯಕ್ರಮದಲ್ಲಿ ಲಾಂಚ್ ಮಾಡಿದೆ. ಐಫೋನ್ 13 ಸರಣಿಯಲ್ಲಿ ನೀವು, ಐಫೋನ್ 13, ಐಫೋನ್, 13 ಮಿನಿ, ಐಫೋನ್ 13 ಪ್ರೋ ಮತ್ತು ಐಫೋನ್ 13 ಪ್ರೋ ಮ್ಯಾಕ್ಸ್ ಐಫೋನ್‌ಗಳನ್ನು ಕಾಣಬಹುದು.
 
ಈ ಎಲ್ಲ ಹೊಚ್ಚ ಹೊಸ ಆಪಲ್ ಸ್ಮಾರ್ಟ್‌ಫೋನುಗಳು ಯುಎಸ್ ಬಿ  ಟೈಪ್-ಸಿ ಪೋರ್ಟ್, ಒಎಲ್ಇಡಿ (ಪ್ರೊ ಎಕ್ಸ್‌ಡಿಆರ್) ಸ್ಕ್ರೀನ್, ಮ್ಯಾಗ್ಸೇಫ್ ಸಪೋರ್ಟ್ ಮತ್ತು ತ್ವರಿತ 5 ಜಿ ಬ್ಯಾಂಡ್‌ಗಳಿಗೆ ಸಪೋರ್ಟ್ ಮಾಡುತ್ತವೆ.  ಐಫೋನ್ 13 ಒಂದೇ ರೀತಿಯ ಹೊಚ್ಚ ಹೊಸ ಯುಗದ 5nm ಆಪಲ್ A15 ಬಯೋನಿಕ್ SoC ಅನ್ನು ಪಡೆದುಕೊಂಡಿವೆ. ವಿನ್ಯಾಸದ ಬಗ್ಗೆ ಹೇಳುವುದಾದರೆ, ಐಫೋನ್ 13 ಸಂಗ್ರಹವು ಸಮತಟ್ಟಾದ ಮುಖದ ವಿನ್ಯಾಸವನ್ನು ಹೊಂದಿದೆ.

ರಿಬ್ರ್ಯಾಂಡಿಂಗ್ ಕಸರತ್ತು, ಫೇಸ್‌ಬುಕ್ ಹೆಸರು ಮೆಟಾ- Meta!

ಆಪಲ್ ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿರುವ ಈ ಐಫೋನುಗಳು ನಿಧಾನವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಿವೆ. ಇದರ ಪರಿಣಾಮವೇ ಆಪಲ್ ಕಂಪನಿಯ ಒಟ್ಟಾರೆ ಆದಾಯದಲ್ಲಿ ಹೆಚ್ಚಾಗಿರುವುದನ್ನು ಗುರುತಿಸಬಹುದಾಗಿದೆ. 

Follow Us:
Download App:
  • android
  • ios