Asianet Suvarna News Asianet Suvarna News

ಇನ್ಮುಂದೆ ಮೊಬೈಲ್ ಇಂಟರ್ನೆಟ್ ಬಳಸಬೇಕಾದ್ರೆ ಚಹರೆ ಸ್ಕ್ಯಾನ್ ಮಾಡೋದು ಕಡ್ಡಾಯ!

ಆಧುನಿಕ ತಂತ್ರಜ್ಞಾನ ಬಳಕೆ, ಹೊಸ ಆವಿಷ್ಕಾರದಲ್ಲಿ ಮುಂದಿರುವ ದೇಶದಲ್ಲಿ ಹೊಸ ನಿಯಮ; ಹೊಸ ಮೊಬೈಲ್ ಫೋನ್ ಬಳಕೆ ಮಾಡುವಾಗ ಕಡ್ಡಾಯವಾಗಿ ಮುಖ ಸ್ಕ್ಯಾನ್ ಮಾಡುವ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. 

First Published Dec 2, 2019, 7:08 PM IST | Last Updated Dec 2, 2019, 7:08 PM IST

ಆಧುನಿಕ ತಂತ್ರಜ್ಞಾನ ಬಳಕೆ, ಹೊಸ ಆವಿಷ್ಕಾರದಲ್ಲಿ ಚೀನಾ ಇತರ ಎಲ್ಲಾ ದೇಶಗಳಿಂತ ಮುಂದಿದೆ. ಇದೀಗ ಹೊಸ ಮೊಬೈಲ್ ಫೋನ್  ಬಳಕೆ ಮಾಡುವಾಗ ಕಡ್ಡಾಯವಾಗಿ ಮುಖ ಸ್ಕ್ಯಾನ್ ಮಾಡುವ ಹೊಸ ತಂತ್ರಜ್ಞಾನವನ್ನು ಜಾರಿಗೆ ತರುತ್ತಿದೆ. 

ಇದನ್ನೂ ಓದಿ | ವಾಟ್ಸಪ್‌ನಲ್ಲಿ ಹೊಸ ಫೀಚರ್; ಈಗ ನೀವೇ ಬಾಸ್, ನೀವೇ ಸ್ಪೆಶಲ್!...

ಕಳೆದ ಸೆಪ್ಟೆಂಬರ್‌ನಲ್ಲಿ ಮುಖ ಸ್ಕ್ಯಾನ್ ಕಡ್ಡಾಯ ತಂತ್ರಜ್ಞಾನ ಪರಚಯಿಸಲಾಗಿತ್ತು. ಇದೀಗ ಜಾರಿಗೆ ಬಂದಿದೆ.  ಹೊಸ ನಿಯಮದಿಂದ  ಇಂಟರ್ನೆಟ್ ಬಳಕೆದಾರರ ಹೆಸರು, ನೋಂದಣಿ ಹಾಗೂ ವಿಳಾಸ ತಿಳಿಯಲಿದೆ. ಇದಕ್ಕಾಗಿ ಟೆಲಿಕಾಂ ಆಪರೇಟರ್‌ಗಳಿಗೆ ಚೀನಾ ಕೈಗಾರಿಕಾ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ನೊಟೀಸ್ ನೀಡಿದೆ. 

Video Top Stories