Mandya: ಗಮನ ಸೆಳೆದ ನಾಟಿಕೋಳಿ ಸಾರಿನೊಂದಿಗೆ ಮುದ್ದೆ ತಿನ್ನುವ ಸ್ಪರ್ಧೆ
ಮಂಡ್ಯದ (Mandya) ಕೊತ್ತತ್ತಿ ಗ್ರಾಮದಲ್ಲಿ ನಾಟಿಕೋಳಿ ಸಾರಿನೊಂದಿಗೆ ಮುದ್ದೆ ತಿನ್ನುವ ಸ್ಪರ್ಧೆ ಗಮನ ಸೆಳೆಯಿತು. ಗ್ರಾಮದ ವಿಶ್ವೇಶ್ವರಯ್ಯ ಯುವಕರ ಬಳಗದಿಂದ ಸ್ಪರ್ಧೆ ಆಯೋಜನೆ ಮಾಡಲಾಗಿದ್ದು, 50 ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು.
ಮಂಡ್ಯ(ಡಿ. 27): ಇಲ್ಲಿನ ಕೊತ್ತತ್ತಿ ಗ್ರಾಮದಲ್ಲಿ ನಾಟಿಕೋಳಿ ಸಾರಿನೊಂದಿಗೆ ಮುದ್ದೆ ತಿನ್ನುವ ಸ್ಪರ್ಧೆ ಗಮನ ಸೆಳೆಯಿತು. ಗ್ರಾಮದ ವಿಶ್ವೇಶ್ವರಯ್ಯ ಯುವಕರ ಬಳಗದಿಂದ ಸ್ಪರ್ಧೆ ಆಯೋಜನೆ ಮಾಡಲಾಗಿದ್ದು, 50 ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು. 2.5 kg ಮುದ್ದೆ ತಿಂದು ಮೊತ್ತಹಳ್ಳಿ ಕೆಂಪರಾಜು ಮೊದಲ ಬಹುಮಾನ ಪಡೆದರೆ, 2.3 Kg ಮುದ್ದೆ ತಿಂದು ಹುಣಸಹಳ್ಳಿಯ ಶಿವಣ್ಣ ದ್ವಿತೀಯ ಬಹುಮಾನ ಪಡೆದರು.
2.2kg ಮುದ್ದೆ ತಿಂದು ಹುಲ್ಕೇರೆ ಪ್ರಶಾಂತ್ ಮೂರನೇ ಬಹುಮನ ಪಡೆದರು. 2.1 ಕೆಜಿ ಮುದ್ದೆ ತಿಂದು ಹನಿಯಂಬಾಡಿ ಮಹೇಶ್ ಸಮಾಧಾನಕರ ಬಹುಮಾನ ಪಡೆದರು. ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗೆದ್ದವರಿಗೆ 5001 ಸಾವಿರ ಮತ್ತು ಟ್ರೋಫಿ, ದ್ವಿತೀಯ ಬಹುಮಾನ ಗೆದ್ದವರಿಗೆ 3001 ಸಾವಿರ ಮತ್ತು ಟ್ರೋಫಿ, ತೃತೀಯ ಬಹುಮಾನವಾಗಿ ಗೆದ್ದವರಿಗೆ 1001 ರೂ ಮತ್ತು ಟ್ರೋಫಿ ವಿತರಣೆ ಮಾಡಲಾಯಿತು. ನಾಲ್ಕನೇಯ ಸಮಾಧಾನಕರ ಬಹುಮಾನ ಪಡೆದವರಿಗೆ 1001 ಮತ್ತು ಟ್ರೋಫಿ ನೀಡಲಾಯಿತು. ಇತ್ತಿಚಿನ ದಿನಗಳಲ್ಲಿ ನಶಿಸುತ್ತಿರುವ ಗ್ರಾಮೀಣಾ ಕ್ರೀಡೆ ಉಳಿವಿಗಾಗಿ ಯುವಕರು ಸ್ಪರ್ಧೆ ಆಯೋಜಿಸಿದ್ದರು.