Financiers Harassment ಸಾಲ ಕಟ್ಟುವಂತೆ ಕಿರುಕುಳ, ತನ್ನದೇ ವಾಹನಕ್ಕೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ ಮಾಲೀಕ!

 ಎರಡು ತಿಂಗಳಿನಿಂದ ಸಾಲ ಕಟ್ಟಿಲ್ಲ ಎಂದು ಫೈನಾನ್ಸರ್ ನೀಡುತ್ತಿದ್ದ ತೀವ್ರ ಕಿರುಕುಳಕ್ಕೆ ಬೇಸತ್ತು ತನ್ನ ವಾಹನಕ್ಕೆ ಬೆಂಕಿ ಇಟ್ಟು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಖಾಸಗಿ ಫೈನಾನ್ಸ್‌ನಿಂದ ಸಾಲ ಪಡೆದು ಕ್ರೂಸರ್ ವಾಹನ ಖರೀದಿಸಿದ್ದ ಸುಭಾಷ್ ಚಂದ್ರ ಕಳೆದ ಎರಡು ತಿಂಗಳಿನಿಂದ ಕೊರೋನಾ ನಿರ್ಬಂಧಗಳಿಂದ ಸಾಲ ಕಟ್ಟಲು ಸಾಧ್ಯವಾಗಿರಲಿಲ್ಲ. ಆದರೆ ಸಾಲ ಕಟ್ಟಲು ತೀವ್ರ ಕಿರುಕುಳ ನೀಡಿದ ಫೈನಾನ್ಸಿಯರ್ ವಾಹನ ಜಪ್ತಿ ಮಾಡುವುದಾಗಿ ಬೆದರಿಸಿದ್ದಾರೆ. ಪರಿಣಾಮ ಕೊಪ್ಪಳದ ರಸ್ತೆಯಲ್ಲಿ ವಾಹನ ನಿಲ್ಲಿಸಿ ವಾಹನಕ್ಕೆ ಬೆಂಕಿ ಹಚ್ಚಿ ತಾನು ಆತ್ಮಹತ್ಯೆಗೆ ಮಾಲೀಕ ಸುಭಾಷ್ ಚಂದ್ರ ಯತ್ನಿಸಿದ್ದಾನೆ. 

Share this Video
  • FB
  • Linkdin
  • Whatsapp

ಕೊಪ್ಪಳ(ಜ.30): ಎರಡು ತಿಂಗಳಿನಿಂದ ಸಾಲ ಕಟ್ಟಿಲ್ಲ ಎಂದು ಫೈನಾನ್ಸರ್ ನೀಡುತ್ತಿದ್ದ ತೀವ್ರ ಕಿರುಕುಳಕ್ಕೆ ಬೇಸತ್ತು ತನ್ನ ವಾಹನಕ್ಕೆ ಬೆಂಕಿ ಇಟ್ಟು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಖಾಸಗಿ ಫೈನಾನ್ಸ್‌ನಿಂದ ಸಾಲ ಪಡೆದು ಕ್ರೂಸರ್ ವಾಹನ ಖರೀದಿಸಿದ್ದ ಸುಭಾಷ್ ಚಂದ್ರ ಕಳೆದ ಎರಡು ತಿಂಗಳಿನಿಂದ ಕೊರೋನಾ ನಿರ್ಬಂಧಗಳಿಂದ ಸಾಲ ಕಟ್ಟಲು ಸಾಧ್ಯವಾಗಿರಲಿಲ್ಲ. ಆದರೆ ಸಾಲ ಕಟ್ಟಲು ತೀವ್ರ ಕಿರುಕುಳ ನೀಡಿದ ಫೈನಾನ್ಸಿಯರ್ ವಾಹನ ಜಪ್ತಿ ಮಾಡುವುದಾಗಿ ಬೆದರಿಸಿದ್ದಾರೆ. ಪರಿಣಾಮ ಕೊಪ್ಪಳದ ರಸ್ತೆಯಲ್ಲಿ ವಾಹನ ನಿಲ್ಲಿಸಿ ವಾಹನಕ್ಕೆ ಬೆಂಕಿ ಹಚ್ಚಿ ತಾನು ಆತ್ಮಹತ್ಯೆಗೆ ಮಾಲೀಕ ಸುಭಾಷ್ ಚಂದ್ರ ಯತ್ನಿಸಿದ್ದಾನೆ. 

ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಇನ್ನು ಸ್ಥಳೀಯರು ಮಾಲೀಕ ಸುಭಾಷ್ ಹೆಚ್ಚಿನ ಅಪಾಯವಿಲ್ಲದೆ ರಕ್ಷಣೆ ಮಾಡಿದ್ದಾರೆ. ಇದೀಗ ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Video