
ಗೌರಿಬಿದನೂರಿನಲ್ಲಿ JDS, ಕಾಂಗ್ರೆಸ್ ಅಭ್ಯರ್ಥಿಗಳ ಟೈ, ಲಾಟರಿಗೆ ಜೈ
ಗೌರಿ ಬಿದನೂರು ನಗರಸಭೆಯ 22 ನೇ ವಾರ್ಡ್ ಫಲಿತಾಂಶ ಸಮ ಸಮವಾಗಿದೆ. ಕಾಂಗ್ರೆಸ್ ಜೆಡಿಎಸ್ ಎರಡೂ ಪಕ್ಷಗಳಿಗೆ ಸಮ ಮತಗಳು ಬಂದಿವೆ. ಮತ್ತೆ ಮತ್ತೆ ಎಣಿಕೆ ಮಾಡಿ ನೋಡಿ ಸ್ಪಷ್ಟತೆ ನೋಡುತ್ತಿದ್ದು, ಫೈನಲ್ ಆಗಿ ಘೋಷಿಸಬೇಕಿದೆ.
ಕೋಲಾರ(ನ.14): ಗೌರಿ ಬಿದನೂರು ನಗರಸಭೆಯ 22 ನೇ ವಾರ್ಡ್ ಫಲಿತಾಂಶ ಸಮ ಸಮವಾಗಿದೆ. ಕಾಂಗ್ರೆಸ್ ಜೆಡಿಎಸ್ ಎರಡೂ ಪಕ್ಷಗಳಿಗೆ ಸಮ ಮತಗಳು ಬಂದಿವೆ. ಮತ್ತೆ ಮತ್ತೆ ಎಣಿಕೆ ಮಾಡಿ ನೋಡಿ ಸ್ಪಷ್ಟತೆ ನೋಡುತ್ತಿದ್ದು, ಫೈನಲ್ ಆಗಿ ಘೋಷಿಸಬೇಕಿದೆ.
ಕೋಲಾರ: ನಗರಸಭೆ ಚುನಾವಣಾ ಫಲಿತಾಂಶ ಪ್ರಕಟ, ಅಧಿಕಾರ ಅತಂತ್ರ
ಕಾಂಗ್ರೆಸ್ ಅಭ್ಯರ್ಥಿ ಗಿರೀಶ್, ಜೆಡಿಎಸ್ ಅಭ್ಯರ್ಥಿ ಗೋವಿಂದ್ ಅವರ ನಡುವೆ ಸಮಬಲದ ಸ್ಪರ್ಧೆ ನಡೆದಿತ್ತು, ಅದೇ ರೀತಿ ಸಮಬಲದಲ್ಲಿ ಮತ ಬಂದಿದೆ. ಒಂದೇ ಒಂದು ಮತವೂ ವ್ಯತ್ಯಾಸ ಬಂದಿಲ್ಲ. ಇಲ್ಲಿನ ಫಲಿತಾಂಶ ಅತಂತ್ರವಾಗಿದೆ. ಕಡೆಯವರೆಗೂ ಇದೇ ರೀತಿ ಮುಂದುವರಿದಲ್ಲಿ ಕೊನೆಗೆ ಲಾಟರಿ ಮೂಲಕ ಗೆಲುವನ್ನು ನಿರ್ಧರಿಸಲಾಗುತ್ತದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಅಭ್ಯರ್ಥಿಗಳಿಗೂ 439 ಮತಗಳು ಲಭಿಸಿವೆ. ಒಂದೇ ಒಂದು ಮತವಾದರೂ ಬರಲಿ ಎಂದು ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಕಾದು ಕುಳಿತಿದ್ದು, ಒಂದು ಮತ ಹೆಚ್ಚಿಗೆ ಲಭ್ಯವಾದರೂ ಸೋಲು ಗೆಲುವು ನಿರ್ಧಾರವಾಗಲಿದೆ.