ಕೋಲಾರ: ನಗರಸಭೆ ಚುನಾವಣಾ ಫಲಿತಾಂಶ ಪ್ರಕಟ, ಅಧಿಕಾರ ಅತಂತ್ರ
ನಗರಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಅಧಿಕಾರ ಅತಂತ್ರವಾಗುವ ಪರಿಸ್ಥಿತಿ ಎದುರಾಗಿದೆ. ನಗರಸಭೆಯ 35 ವಾರ್ಡುಗಳಿಗೆ ನ.12 ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಮುಗಿದಿದ್ದು, ಬಿಜೆಪಿ 3 ಸ್ಥಾನ, ಕಾಂಗ್ರೆಸ್ 12 ಸ್ಥಾನ, ಜೆಡಿಎಸ್ 8 ಸ್ಥಾನ, ಪಕ್ಷೇತರ 12 ಗೆದ್ದಿದೆ.
ಕೋಲಾರ(ನ.14): ನಗರಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಅಧಿಕಾರ ಅತಂತ್ರವಾಗುವ ಪರಿಸ್ಥಿತಿ ಎದುರಾಗಿದೆ. ನಗರಸಭೆಯ 35 ವಾರ್ಡುಗಳಿಗೆ ನ.12 ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಮುಗಿದಿದ್ದು, ಬಿಜೆಪಿ 3 ಸ್ಥಾನ, ಕಾಂಗ್ರೆಸ್ 12 ಸ್ಥಾನ, ಜೆಡಿಎಸ್ 8 ಸ್ಥಾನ, ಪಕ್ಷೇತರ 12 ಗೆದ್ದಿದೆ.
ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 51,253 ಪುರುಷರು, 52,101 ಮಹಿಳೆಯರು ಮತ್ತು ಇತರೆ 18 ಸೇರಿ ಒಟ್ಟು1.32,282 ಮತದಾರರ ಪೈಕಿ35,886 ಪುರುಷರು(ಶೇ 70.02) ,34495 ಮಹಿಳೆಯರು(ಶೇ.66.32 ಮತ್ತು ಇತರೆ 4 ಮಂದಿ ಸೇರಿ ಒಟ್ಟು 70385 ಮತದಾನವಾಗಿದೆ.
ಕೋಲಾರ: ವಾರ್ಡ್ ನಂ. 1ರಲ್ಲಿ JDS ಗೆಲುವು
ವಾರ್ಡ್ 01ರಲ್ಲಿ ಶ್ವೆತ (JDS), ವಾರ್ಡ್ 02 ಪ್ರವೀಣ್ ಗೌಡ(JDS), ವಾರ್ಡ್ 03 ನಾರಾಯಣಮ್ಮ (ಕಾಂಗ್ರೆಸ್), ವಾರ್ಡ್ 04 ಪ್ರಸಾದ್ ಬಾಬು (ಕಾಂಗ್ರೆಸ್), ವಾರ್ಡ್ 05 ಅಪೂರ್ವ (ಪಕ್ಷೇತರ), ವಾರ್ಡ್ 06 ಮುಬಾರಕ್ (ಕಾಂಗ್ರೆಸ್), ವಾರ್ಡ್ 07 ಸುರೇಶ್ (JDS), ವಾರ್ಡ್ 08 ಪಾವನ (ಕಾಂಗ್ರೆಸ್), ವಾರ್ಡ್ 09 ಅಶ್ವತ್ (ಪಕ್ಷೇತರ), ವಾರ್ಡ್ 10 ರಂಗಮ್ಮ (BJP), ವಾರ್ಡ ನಂ 11 ಮಂಜುನಾಥ್ (ಪಕ್ಷೇತರ), ವಾರ್ಡ್ 12 ರಾಕೇಶ್ (JDS), ವಾರ್ಡ್ 13 ಮಂಜುನಾಥ (JDS), ವಾರ್ಡ್ 14 ಮುರಳಿಗೌಡ(BJP), ವಾರ್ಡ್ 15 ಸಂಗೀತ (ಪಕ್ಷೇತರ), ವಾರ್ಡ್ 16 ಪೈರೋಜ್ ಖಾನ್ (ಪಕ್ಷೇತರ),( ಎಸ್.ಡಿ.ಪಿ.ಐ), ವಾರ್ಡ್ 17 ಲಿಖಾತ್ ಶಶಿಧರ್ (ಪಕ್ಷೇತರ), (ಎಸ್.ಡಿ.ಪಿ.ಐ) ವಾರ್ಡ್ 18 ಸಮೀವುಲ್ಲಾ (ಪಕ್ಷೇತರ) (ಎಸ್.ಡಿ.ಪಿ.ಐ), ವಾರ್ಡ್ 19 - ಅಸ್ಲಂಪಾಷ (ಕಾಂಗ್ರೆಸ್), ವಾರ್ಡ್ 20 ಸೌಭಾಗ್ಯ (BJP), ವಾರ್ಡ್ 21 ಇದಾಯತುಲ್ಲಾ (JDS), ವಾರ್ಡ್ 22 ಷನತಾಜ್ (JDS), ವಾರ್ಡ್ 23 ಅಝ್ರ ನಸ್ರೀನ್ (ಕಾಂಗ್ರೆಸ್), ವಾರ್ಡ್ 24 ಮಂಜುನಾಥ್ (ಪಕ್ಷೇತರ), ವಾರ್ಡ್ 25 ಗುಣಶೇಖರ್ (ಪಕ್ಷೇತರ), ವಾರ್ಡ್ 26 ಭಾಗ್ಯಮ್ಮ (ಕಾಂಗ್ರೆಸ್), ವಾರ್ಡ್ 27 ಕೆ. ಲಕ್ಷ್ಮಿದೇವಿ (ಕಾಂಗ್ರೆಸ್), ವಾರ್ಡ್ ನಂ 28 ಖಾಜ ಮೊಹಿದ್ದೀನ್ (ಪಕ್ಷೇತರ) (ಎಸ್.ಡಿ.ಪಿ.ಐ), ವಾರ್ಡ್ 29 ಅಂಬರೀಶ್ (ಕಾಂಗ್ರೆಸ್), ವಾರ್ಡ್ 30 ನೂರಿ (ಪಕ್ಷೇತರ), ವಾರ್ಡ್ 31 ಅಫ್ಸರ್ (ಕಾಂಗ್ರೆಸ್), ವಾರ್ಡ್ 32 ನಗ್ಮಾ ಬಾನು (JDS), ವಾರ್ಡ್ 33 ನಾಜೀಯಾ ತಾಜ್ (ಕಾಂಗ್ರೆಸ್), ವಾರ್ಡ್ 34 ಮುಬಿನ್ ತಾಜ್ (ಕಾಂಗ್ರೆಸ್), ವಾರ್ಡ್ 35 ತಹಸೀನ್ ತಾಜ್ (ಪಕ್ಷೇತರ) ಗೆಲುವು ಸಾಧಿಸಿದ್ದಾರೆ.
ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ : ಮತ ಎಣಿಕೆ ಆರಂಭ
ದಾವಣಗೆರೆ, ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ 14 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಒಟ್ಟು 409 ವಾರ್ಡ್‌ಗಳಿಗೆ ಮಂಗಳವಾರ ಮತದಾನ ನಡೆದಿದ್ದು, ಗುರುವಾರ ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳಲಿದೆ.